ಕಾಂಗ್ರೆಸ್ ಪಕ್ಷ ಕೂಡಾ ಬಿಜೆಪಿಯಂತೆ ಶ್ರೀಮಂತರ ಪರ: ಕರ್ನಾಟಕ ಸರಕಾರದ ವಿರುದ್ಧ ಮಾಯಾವತಿ ವಾಗ್ದಾಳಿ

Update: 2024-07-19 08:54 GMT

ಮಾಯಾವತಿ | PC : PTI  

ಹೊಸ ದಿಲ್ಲಿ: ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಪ್ರಸ್ತಾವನೆ ಹೊಂದಿದ್ದ ಮಸೂದೆ ಮಂಡನೆಯನ್ನು ತಡೆ ಹಿಡಿದಿರುವ ಕರ್ನಾಟಕ ಸರಕಾರದ ನಿಲುವಿನ ವಿರುದ್ಧ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಮಾಯಾವತಿ, "ಕರ್ನಾಟಕದಲ್ಲಿ ಸ್ಥಳೀಯರಿಗೆ ಖಾಸಗಿ ಕಂಪನಿಗಳ ಆಡಳಿತಾತ್ಮಕ ಹಂತದಲ್ಲಿ ಶೇ. 50ರಷ್ಟು ಮೀಸಲಾತಿ ಹಾಗೂ ಆಡಳಿತೇತರ ಹುದ್ದೆಗಳಲ್ಲಿ ಶೇ. 70ರಷ್ಟು ಮೀಸಲಾತಿ ನೀಡುವ ಕರ್ನಾಟಕ ಸರಕಾರದ ಪ್ರಸ್ತಾವನೆಯು ವಿವಾದಕ್ಕಿಂತ ಮಿಗಿಲಾದುದು. ಆ ಮಸೂದೆಯನ್ನು ಕೈಗಾರಿಕೋದ್ಯಮಿಗಳ ಒತ್ತಡಕ್ಕೆ ಮಣಿದು ಹಿಂಪಡೆದಿರುವುದು, ಕಾಂಗ್ರೆಸ್ ಪಕ್ಷವು ಬಿಜೆಪಿಯಂತೆಯೇ ಶ್ರೀಮಂತರ ಪರ ಎಂಬುದಕ್ಕೆ ಹೊಸ ಪುರಾವೆಯಾಗಿದೆ" ಎಂದು ಟೀಕಿಸಿದ್ದಾರೆ.

ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಒದಗಿಸುವ ಕರ್ನಾಟಕ ಸರಕಾರದ ಪ್ರಸ್ತಾವಕ್ಕೆ ಕೈಗಾರಿಕೋದ್ಯಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಈ ಅವಕಾಶವನ್ನೇ ಬಳಸಿಕೊಂಡು ಕೇರಳದಂಥ ನೆರೆಯ ರಾಜ್ಯಗಳು ಕರ್ನಾಟಕದಲ್ಲಿನ ಉದ್ಯಮಿಗಳಿಗೆ ತಮ್ಮ ರಾಜ್ಯದಲ್ಲಿ ಉದ್ಯಮ ಸ್ಥಾಪಿಸುವಂತೆ ಆಮಿಷವೊಡ್ಡಲು ಮುಂದಾಗಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News