ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಅವಕಾಶ ದೊರೆಯಲಿದೆ: ಸಚಿನ್ ಪೈಲಟ್

Update: 2023-11-25 05:55 GMT

ಸಚಿನ್ ಪೈಲಟ್ (PTI)

ಜೈಪುರ (ರಾಜಸ್ಥಾನ): ಕಾಂಗ್ರೆಸ್ ಪಕ್ಷಕ್ಕೆ ರಾಜಸ್ಥಾನದಲ್ಲಿ ಮತ್ತೊಂದು ಅವಕಾಶ ದೊರೆಯಲಿದೆ ಎಂದು ಶನಿವಾರ ವಿಶ‍್ವಾಸ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್, ಜನರ ಮನಸ್ಸು ಈ ಬಾರಿ ಪರ್ಯಾಯ ಸರ್ಕಾರವನ್ನು ಆರಿಸುವ ಪ್ರವೃತ್ತಿಯನ್ನು ಬದಲಿಸುವೆಡೆಗೆ ಇದೆ ಎಂದೂ ಹೇಳಿದ್ದಾರೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.

ANI ಸುದ್ದಿ ಸಂಸ್ಥೆಯೊಂದಿಗೆ ಚುನಾವಣೆ ಕುರಿತು ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್, “ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಮತ್ತೊಂದು ಅವಕಾಶ ಪಡೆಯುವ ಬಗ್ಗೆ ನನಗೆ ವಿಶ್ವಾಸವಿದೆ. ನಾವು ಸರ್ಕಾರ ರಚಿಸಲು ಅಗತ್ಯವಿರುವ ಸಂಖ್ಯೆಯನ್ನು ಪಡೆಯಲಿದ್ದೇವೆ. ಇಲ್ಲಿನ ಜನರು ಭರವಸೆಯನ್ನು ಈಡೇರಿಸುವ ಹಾಗೂ ಬದ್ಧತೆಯಿಂದ ಉಳಿಯುವವರನ್ನು ಬಯಸುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

ಈ ಬಾರಿ ಪರ್ಯಾಯ ಸರ್ಕಾರಗಳನ್ನು ಚುನಾಯಿಸುವ ಪ್ರವೃತ್ತಿಯನ್ನು ಬದಲಿಸುವೆಡೆಗೆ ಜನರ ಮನಸ್ಸಿದೆ” ಎಂದೂ ಅವರು ಹೇಳಿದ್ದಾರೆ.

ಆದರೆ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರೊಂದಿಗಿನ ತಮ್ಮ ಇತ್ತೀಚಿನ ಭಿನ್ನಾಭಿಪ್ರಾಯಗಳ ಕುರಿತು ಪ್ರತಿಕ್ರಿಯಿಸಲು ಅವರು ನಿರಾಕರಿಸಿದ್ದಾರೆ.

“ನಾವಿಬ್ಬರೂ ಪಕ್ಷಕ್ಕಾಗಿ ಒಗ್ಗಟ್ಟಾಗಿ ಕೆಲಸ ಮಾಡಿದ್ದೇವೆ. ಇದು ಇಬ್ಬರು ಅಥವಾ ಮೂವರ ವಿಷಯವಲ್ಲ. ರಾಜಸ್ಥಾನದ ಇಡೀ ಕಾಂಗ್ರೆಸ್ ಘಟಕವು ಒಗ್ಗಟ್ಟಾಗಿದೆ” ಎಂದು ಸಚಿನ್ ಪೈಲಟ್ ಉತ್ತರಿಸಿದ್ದಾರೆ.

200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಯ ಪೈಕಿ 199 ವಿಧಾನಸಭಾ ಕ್ಷೇತ್ರಗಳಲ್ಲಿಂದು ಮತದಾನ ಪ್ರಾರಂಭಗೊಂಡಿದೆ. ಕರಣ್ ಪುರ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗುರ್ಮೀತ್ ಸಿಂಗ್ ಕೂನರ್ ನಿಧನರಾಗಿದ್ದರಿಂದ ಆ ಕ್ಷೇತ್ರದ ಮತದಾನವನ್ನು ಮುಂದೂಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News