ದಿಲ್ಲಿ ಕೋಚಿಂಗ್ ಸೆಂಟರ್ ದುರಂತ: 15 ಮಂದಿ ಸಮನ್ವಯ ಸಮಿತಿಗೆ ಪ್ರತಿಭಟನಕಾರರ ನಿರ್ಧಾರ

Update: 2024-07-31 16:48 GMT

PC : PTI 

ಹೊಸದಿಲ್ಲಿ : ರಾಜೀಂದರ್ ನಗರ ಕೋಚಿಂಗ್ ಸೆಂಟರ್‌ನಲ್ಲಿ ಐಎಎಸ್ ವಿದ್ಯಾರ್ಥಿಗಳ ಸಾವಿನ ಘಟನೆಯ ವಿರುದ್ಧ ತಾವು ನಡೆಸುತ್ತಿರುವ ಪ್ರತಿಭಟನೆಯ ಮುಂದಿನ ಕಾರ್ಯತಂತ್ರವನ್ನು ನಿರ್ಧರಿಸಲು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಂವಹನ ನಡೆಸಲು 15 ಮಂದಿ ಸದಸ್ಯರನ್ನೊಳಗೊಂಡ ಸಮನ್ವಯ ಸಮಿತಿಯನ್ನು ರಚಿಸುವುದಾಗಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಬುಧವಾರ ತಿಳಿಸಿದ್ದಾರೆ.

ಈ ಮಧ್ಯೆ ರಾವು ಸ್ಟಡಿ ಸರ್ಕಲ್ ಕಟ್ಟಡದ ತಳಅಂತಸ್ತಿನಲ್ಲಿ ನೆರೆ ನೀರು ನುಗ್ಗಿ ಮೂವರು ನಾಗರಿಕ ಸೇವಾ ಪರೀಕ್ಷಾ ಆಕಾಂಕ್ಷಿ ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆಗೆ ಸಂಬAಧಿಸಿ ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿರಿಸಿದೆ.

ಈ ಮಧ್ಯೆ ಪೊಲೀಸ್ ಉಪ ಆಯುಕ್ತ (ಕೇಂದ್ರ) ಎಂ. ಹರ್ಷ ವರ್ಧನ್ ಅವರು ಹೇಳಿಕೆಯೊಂದನ್ನು ನೀಡಿ, ಪ್ರತಿಭಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ ಹಾಗೂ ಅವರ ಬೇಡಿಕೆಗಳ ಬಗ್ಗೆ ಸಂವಹನ ನಡೆಸಿದ್ದಾರೆ.

ಮೂವರು ಐಎಎಸ್ ವಿದ್ಯಾರ್ಥಿಗಳ ಸಾವನ್ನು ಪ್ರತಿಭಟಿಸಿ ದಿಲ್ಲಿ ವಿವಿಧ ನಾಗರಿಕ ಸೇವಾ ಪರೀಕ್ಷೆ ಕೋಚಿಂಗ್‌ಸೆAಟರ್‌ಗಳು ಆಕಾಂಕ್ಷಿ ಅಭ್ಯರ್ಥಿಗಳು ರವಿವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News