ದಿಲ್ಲಿ: ತಮಿಳುನಾಡು ರೈತರಿಂದ ಟವರ್ ಗಳನ್ನೇರಿ ಮಾನವ ತಲೆಬುರುಡೆಗಳೊಂದಿಗೆ ಪ್ರತಿಭಟನೆ

Update: 2024-04-24 16:22 GMT

Photoscreengrab : ANI 

ಹೊಸದಿಲ್ಲಿ : ತಮಿಳುನಾಡಿನ ಸುಮಾರು 200 ರೈತರು ಬುಧವಾರ ದಿಲ್ಲಿಯ ಜಂತರ್ ಮಂತರ್ನಲ್ಲಿ ಸಮಾವೇಶಗೊಂಡು ತಮ್ಮ ಬೆಳೆಗಳಿಗೆ ಸೂಕ್ತ ಬೆಲೆಗಳು ಮತ್ತು ನದಿಗಳ ಅಂತರ್ಜೋಡಣೆಗಾಗಿ ಆಗ್ರಹಿಸಿದರು.

ಪ್ರತಿಭಟನೆಯ ಅಂಗವಾಗಿ ತಮ್ಮ ಹೋರಾಟದತ್ತ ಗಮನ ಸೆಳೆಯಲು ಕೆಲವು ರೈತರು ತಲೆಬುರುಡೆಗಳೊಂದಿಗೆ ಮೊಬೈಲ್ ಟವರನ್ನು ಹತ್ತಿದ್ದರು.

ರೈತರು ತಮ್ಮೊಂದಿಗೆ ನೇಗಿಲುಗಳು ಹಾಗೂ ತಲೆಬುರುಡೆಗಳು ಮತ್ತು ಮೂಳೆಗಳನ್ನೂ ತಂದಿದ್ದಾರೆ. ಈ ತಲೆಬುರುಡೆಗಳು ಮತ್ತು ಮೂಳೆಗಳು ಆತ್ಮಹತ್ಯೆ ಮಾಡಿಕೊಂಡಿರುವ ರೈತರದ್ದಾಗಿವೆ ಎಂದು ಅವರು ಹೇಳಿದ್ದಾರೆ.

ಕೃಷಿ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಕೇಂದ್ರ ಸರಕಾರವು ಭರವಸೆ ನೀಡಿದ್ದರೂ ಬೆಳೆಗಳ ಬೆಲೆಗಳು ನಿಶ್ಚಲವಾಗಿಯೇ ಉಳಿದಿವೆ ಎಂದು ಆರೋಪಿಸಿದ ರೈತರು, ಬೆಲೆಗಳಿಗಾಗಿ ಇಮ್ಮಡಿ ಲಾಭದಾಯಕ ಬೆಳೆಗಳು, ರೈತರಿಗೆ 5,000 ರೂ.ಗಳ ಪಿಂಚಣಿ, ವೈಯಕ್ತಿಕ ವಿಮೆ ಮತ್ತು ದೇಶದಲ್ಲಿಯ ಎಲ್ಲ ನದಿಗಳ ಅಂತರ್ಜೋಡಣೆ ತಮ್ಮ ಬೇಡಿಕೆಗಳಾಗಿವೆ ಎಂದು ತಿಳಿಸಿದರು.

ತಮ್ಮ ಬೇಡಿಕೆಗಳು ಈಡೇರದಿದ್ದರೆ ವಾರಣಾಸಿಗೆ ಪ್ರಯಾಣಿಸಿ ಲೋಕಸಭಾ ಚುನಾವಣೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಸ್ಪರ್ಧಿಸುವುದಾಗಿ ರೈತರು ಹೇಳಿಕೆಯಲ್ಲಿ ಘೋಷಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News