ದಿಲ್ಲಿ, ಉತ್ತರ ಪ್ರದೇಶ, ಪಂಜಾಬ್ ನಲ್ಲಿ ಮೇ 18ರ ವರೆಗೆ ಬಿಸಿ ಗಾಳಿ ಬೀಸುವ ಸಾಧ್ಯತೆ : ಐಎಂಡಿ
Update: 2024-05-16 15:50 GMT
ಹೊಸದಿಲ್ಲಿ: ಪಂಜಾಬ್, ಹರ್ಯಾಣ, ಉತ್ತರಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಪಶ್ಚಿಮಬಂಗಾಳ, ಬಿಹಾರ್ ಹಾಗೂ ಗುಜರಾತ್ ನಲ್ಲಿ ಮೇ 18ರ ವರೆಗೆ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಗುರುವಾರ ಹೇಳಿದೆ.
ತನ್ನ ಟ್ವೀಟ್ ನಲ್ಲಿ ಐಎಂಡಿ ಈಶಾನ್ಯ ಭಾರತ, ಬಿಹಾರದಲ್ಲಿ ಮುಂದಿನ 5 ದಿನಗಳಲ್ಲಿ ಹಾಗೂ ಪೂರ್ವ, ಮಧ್ಯ ಭಾರತದಲ್ಲಿ ಮೇ 18ರಿಂದ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದಿದೆ.
ರಾಜಸ್ಥಾನ, ಗುಜರಾತ್, ಉತ್ತರಪ್ರದೇಶ, ಹರ್ಯಾಣ, ಪಂಜಾಬ್, ಮಧ್ಯಪ್ರದೇಶದಲ್ಲಿ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ದಾಟಿದೆ.
ಪಶ್ಚಿಮ ರಾಜಸ್ಥಾನದಲ್ಲಿ ಮೇ 15ರಿಂದ ಮೇ 18ರ ವರೆಗೆ, ಉತ್ತರಪ್ರದೇಶ, ಪಂಜಾಬ್ ಹಾಗೂ ದಕ್ಷಿಣ ಹರ್ಯಾಣದಲ್ಲಿ ಇಂದಿನಿಂದ ಮೇ 18ರ ವರೆಗೆ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.