ಕ್ಷೇತ್ರ ಪುನರ್ವಿಂಗಡಣೆ ಜಂಟಿ ಕ್ರಿಯಾ ಸಮಿತಿ ಸಭೆ | 25 ವರ್ಷಗಳ ಕಾಲ ಕ್ಷೇತ್ರ ಪುನರ್ವಿಂಗಡಣೆಯನ್ನು ಸ್ಥಗಿತಗೊಳಿಸುವಂತೆ ನಿರ್ಣಯ

Update: 2025-03-22 17:47 IST
ಕ್ಷೇತ್ರ ಪುನರ್ವಿಂಗಡಣೆ ಜಂಟಿ ಕ್ರಿಯಾ ಸಮಿತಿ ಸಭೆ | 25 ವರ್ಷಗಳ ಕಾಲ ಕ್ಷೇತ್ರ ಪುನರ್ವಿಂಗಡಣೆಯನ್ನು ಸ್ಥಗಿತಗೊಳಿಸುವಂತೆ ನಿರ್ಣಯ

Photo Credit : thehindu

  • whatsapp icon

ಚೆನ್ನೈ: ಕ್ಷೇತ್ರ ಪುನರ್ವಿಂಗಡಣೆದ ಕುರಿತಾದ ಜಂಟಿ ಕ್ರಿಯಾ ಸಮಿತಿಯ ಸಭೆಯು ಮುಂದಿನ 25 ವರ್ಷಗಳ ಕಾಲ ಕ್ಷೇತ್ರ ಪುನರ್ವಿಂಗಡಣೆಯನ್ನು ಸ್ಥಗಿತಗೊಳಿಸುವಂತೆ ಕೋರುವ ನಿರ್ಣಯವನ್ನು ಅಂಗೀಕರಿಸಿದೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ನೇತೃತ್ವದಲ್ಲಿ ಶನಿವಾರ ಚೆನ್ನೈನಲ್ಲಿ ಆಯೋಜಿಸಿದ್ದ ಜಂಟಿ ಕ್ರಿಯಾ ಸಮಿತಿಯ ಸಭೆಯಲ್ಲಿ ಕೇರಳ, ತೆಲಂಗಾಣ ಮತ್ತು ಪಂಜಾಬ್ ಮುಖ್ಯಮಂತ್ರಿಗಳಾದ ಪಿಣರಾಯಿ ವಿಜಯನ್, ರೇವಂತ್ ರೆಡ್ಡಿ, ಭಗವಂತ್ ಸಿಂಗ್ ಮಾನ್, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಬಿಜೆಡಿ, ಬಿಆರ್ಎಸ್ ಮತ್ತು ಎಸ್ಎಡಿ ಪ್ರತಿನಿಧಿಗಳು ಭಾಗವಹಿಸಿದ್ದರು.

ಡಿಎಂಕೆ ಸಂಸದೆ ಕನಿಮೋಳಿ ಅವರು ಮುಂದಿನ 25 ವರ್ಷಗಳ ಕಾಲ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಕೋರುವ ಜಂಟಿ ಪ್ರಸ್ತಾವನೆಯನ್ನು ಓದಿದರು. ಬಹು ಪಕ್ಷಗಳ ಬೆಂಬಲದೊಂದಿಗೆ ನಡೆದ ಸಭೆಯು ರಾಜಕೀಯ ಪ್ರಾತಿನಿಧ್ಯ ಮತ್ತು ಪ್ರಾದೇಶಿಕ ಸಮತೋಲನದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತು.

ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯ ಬಗ್ಗೆ ಕೇಂದ್ರ ಸರ್ಕಾರವು ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕೆಂದು ಜಂಟಿ ಕ್ರಿಯಾ ಸಮಿತಿ ಸರ್ವಾನುಮತದಿಂದ ಒತ್ತಾಯಿಸಿತು. 1971 ರ ಜನಗಣತಿಯ ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಸಂಸದೀಯ ಕ್ಷೇತ್ರಗಳ ಮೇಲಿನ ಪುನರ್ವಿಂಗಡನೆಯನ್ನು ಮುಂದಿನ 25 ವರ್ಷಗಳವರೆಗೆ ಯಥಾಸ್ಥಿತಿ ಕಾಪಾಡುವಂತೆ ಆಗ್ರಹಿಸಿತು.

ಜಂಟೀ ಕ್ರಿಯಾ ಸಮಿತಿಯ ಮುಂದಿನ ಸಭೆಯು ಮುಂದಿನ ತಿಂಗಳು ಹೈದರಾಬಾದ್ನಲ್ಲಿ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News