ವಿಚಾರಣೆಗೆ ಹಾಜರಾಗಲು BRS ನಾಯಕಿ ಕವಿತಾಗೆ ಈಡಿ ಸಮನ್ಸ್

Update: 2023-09-14 17:42 GMT

 ಕೆ. ಕವಿತಾ | Photo: PTI 

ಹೊಸದಿಲ್ಲಿ: ರಾಷ್ಟ್ರರಾಜಧಾನಿಯಲ್ಲಿ ನಡೆದಿದೆಯನ್ನಲಾದ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ದಿಲ್ಲಿಯ ತನ್ನ ಕಾರ್ಯಾಲಯದಲ್ಲಿ ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಈಡಿ)ವು BRS ನಾಯಕ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಪುತ್ರಿ ಕೆ. ಕವಿತಾ ಅವರಿಗೆ ಜಾರಿ ನಿರ್ದೇಶನಾಲಯವು ನೋಟಿಸ್ ಜಾರಿಗೊಳಿಸಿದೆ.

ಹೊಸದಿಲ್ಲಿಯಲ್ಲಿರುವ ಜಾರಿ ನಿರ್ದೇಶನಾಲಯದ ಮುಖ್ಯ ಕಾರ್ಯಾಲಯದಲ್ಲಿ ಕವಿತಾ ಅವರನ್ನು ಹಲವಾರು ಬಾರಿ ಪ್ರಶ್ನಿಸಲಾಗಿತ್ತು ಹಾಗೂ ಅವರ ಮೊಬೈಲ್ ಫೋನ್ ಅನ್ನು ಏಜೆನ್ಸಿಯು ತನ್ನ ವಶಕ್ಕೆ ಪಡೆದುಕೊಂಡಿತ್ತು.

  ಮದ್ಯ ವ್ಯಾಪಾರಿಗಳಿಗೆ ಪರವಾನಿಗೆಯನ್ನು ನೀಡಲು 2021-22ರಲ್ಲಿ ಜಾರಿಗೊಳಿಸಲಾಗಿದ್ದ ಅಬಕಾರಿ ನೀತಿಯು ಗುಂಪುಗಾರಿಕೆಗೆ ಅವಕಾಶ ಮಾಡಿಕೊಟ್ಟಿದೆ ಹಾಗೂ ಲಂಚ ಪಾವತಿಸಿದ ಕೆಲವೇ ನಿರ್ದಿಷ್ಟ ಮದ್ಯ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಟ್ಟಿದೆ ಎಂದು ಜಾರಿ ನಿರ್ದೇಶನಾಲಯ ಆಪಾದಿಸಿದೆ. ಆದರೆ ದಿಲ್ಲಿಯ ಆಡಳಿತಾರೂಢ ಆಮ್ ಆದ್ಮಿ ಸರಕಾರವು ಈ ಆರೋಪವನ್ನು ಬಲವಾಗಿ ನಿರಾಕರಿಸಿದೆ.

 ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ಅವರು ಹಗರಣದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿದ ತರುವಾಯ, ಜಾರಿ ನಿರ್ದೇಶನಾಲಯವು ಕಪ್ಪುಹಣ ತಡೆ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News