ಗೋವಾ ಎಂಐಎ ವಿಮಾನನಿಲ್ದಾಣಕ್ಕೆ ಸಿಡಿಲು ಬಡಿದು ರನ್ ವೇ ದೀಪಗಳಿಗೆ ಹಾನಿ
Update: 2024-05-23 17:16 GMT
ಹೊಸದಿಲ್ಲಿ : ಗೋವಾದ ಮನೋಹರ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ (ಎಂಐಎ) ಬುಧವಾರ ಸಿಡಿಲು ಬಡಿದು, ರನ್ವೇ ಬದಿಯ ವಿದ್ಯುತ್ ದೀಪಗಳಿಗೆ ಹಾನಿಯಾಗಿದ್ದರಿಂದ ಅಲ್ಲಿ ಇಳಿಯಬೇಕಾಗಿದ್ದ ಆರು ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದದಾರೆ.
ಉತ್ತರ ಗೋವಾದ ಮೋಪಾದಲ್ಲಿರುವ ವಿಮಾನ ನಿಲ್ದಾಣದಲ್ಲಿ ಸಂಜೆ 5 : 15ರ ವೇಳೆಗೆ ಸಿಡಿಲು ಬಡಿದಿರುವುದಾಗಿ ಎಂಐಎ ವಕ್ತಾರರು ತಿಳಿಸಿದ್ದಾರೆ.
ರಾತ್ರಿ 8:00 ಗಂಟೆಯ ವೇಳೆಗೆ ಹಾನಿಗೀಡಾದ ವಿದ್ಯುತ್ ದೀಪಗಳನ್ನು ಏರ್ಮೆನ್ ಸಿಬ್ಬಂದಿ ಸರಿಪಡಿಸಿದ್ದು, ವಿಮಾನನಿಲ್ದಾಣ ಕಾರ್ಯಾಚರಣೆಗಳನ್ನು ಸಹಜ ಸ್ಥಿತಿಗೆ ತಂದರು ಎಂದು ಅವರು ತಿಳಿಸಿದ್ದಾರೆ. ದುರಸ್ತಿ ಕಾರ್ಯಾಚರಣೆಯ ಸಂದರ್ಭದಲ್ಲಿ ಆರು ವಿಮಾನಗಳನ್ನು ಸಮೀಪದ ವಿಮಾನನಿಲ್ದಾಣಗಳಿಗೆ ತಿರುಗಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.