ಮುಂಬೈಯ ಜನಪ್ರಿಯ ಡಬಲ್ ಡೆಕ್ಕರ್ ಬಸ್ ಗಳಿಗೆ ಗುಡ್ ಬೈ
ಮುಂಬೈ: ಮುಂಬೈಯಲ್ಲಿ ಎಂಬತ್ತಕ್ಕೂ ಅಧಿಕ ವರ್ಷಗಳಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಪ್ರಮುಖ ಅಂಗವಾಗಿದ್ದ ಜನಪ್ರಿಯ ಡಬಲ್ ಡೆಕ್ಕರ್ ಬಸ್ ಗಳ ಸಂಚಾರ ಸ್ಥಗಿತಗೊಳ್ಳಲಿದೆ. ಬೃಹನ್ಮುಂಬೈ ವಿದ್ಯುತ್ ಪೂರೈಕೆ ಹಾಗೂ ಸಾಗಾಟ (ಬೆಸ್ಟ್)ದ ಅಧೀನ ಸಂಸ್ಥೆಗಳ ಪ್ರತಿನಿಧಿ ಸೆಪ್ಟಂಬರ್ 12ರಂದು ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ.
1990ರಿಂದ ಪ್ರವಾಸಿಗಳ ದೃಶ್ಯವೀಕ್ಷಣೆಯ ಪ್ರವಾಸಕ್ಕೆ ಜನಪ್ರಿಯವಾಗಿದ್ದ ಓಪನ್ ಟಾಪ್-ಡಬಲ್ ಡೆಕ್ಕರ್ ಬಸ್ ಗಳು ಅಕ್ಟೋಬರ್ ಮೊದಲ ವಾರದಿಂದ ಸಂಚಾರ ಸ್ಥಗಿತಗೊಳಿಸಲಿದೆ ಎಂದು ‘ಬೆಸ್ಟ್ ಅಧೀನ ಸಂಸ್ಥೆಯ ಅಧಿಕಾರಿ ತಿಳಿಸಿದ್ದಾರೆ.
‘‘15 ವರ್ಷಗಳನ್ನು ಪೂರ್ಣಗೊಳಿಸಿರುವುದರಿಂದ ಡಬಲ್ ಡೆಕ್ಕರ್ ಬಸ್ ಗಳು ಸೆಪ್ಟಂಬರ್ 15ರಿಂದ ಉಳಿದಿದ್ದು, ಒಪನ್-ಡೆಕ್ಕ್ ಬಸ್ ಗಳು ಅಕ್ಟೋಬರ್ 5ರಿಂದ ರಸ್ತೆಯಿಂದ ದೂರು ಉಳಿಯಲಿವೆ’’ ಎಂದು ಅವರು ಹೇಳಿದ್ದಾರೆ. ಈ ನಷ್ಟವನ್ನು ಭರಿಸಲು ಕನಿಷ್ಟ 2 ಬಸ್ ಗಳನ್ನು ಅನಿಕ್ ಡಿಪೋದಲ್ಲಿರುವ ತಮ್ಮ ವಸ್ತು ಸಂಗ್ರಹಾಲಯದಲ್ಲಿ ಸುರಕ್ಷಿತವಾಗಿ ಇರಿಸುವಂತೆ ವಿವಿಧ ಪ್ರಯಾಣಿಕರ ಸಂಘಟನೆಗಳು ಹಾಗೂ ಬಸ್ ಅಭಿಮಾನಿಗಳು ಬೆಸ್ಟ್ ಆನ್ನು ಆಗ್ರಹಿಸಿದ್ದಾರೆ.
ಇದನ್ನು ಕಾರ್ಯ ರೂಪಕ್ಕೆ ತರುವಂತೆ ಆಗ್ರಹಿಸಿ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ, ಪ್ರವಾಸೋದ್ಯಮ ಸಚಿವ ಹಾಗೂ ಬೆಸ್ಟ್ ನ ಆಡಳಿತ ಮಂಡಳಿಗೆ ಪತ್ರ ಬರೆದಿದ್ದಾರೆ. ‘‘ಪ್ರಸಕ್ತ 3 ಓಪನ್ ಡೆಕ್ ಬಸ್ ಗಳು ಸೇರಿದಂತೆ ಕೇವಲ 7 ಡಬಲ್ ಡೆಕ್ಕರ್ ಬಸ್ ಗಳು ಬೆಸ್ಟ್ ನಲ್ಲಿ ಇವೆ. ಈ ಬಸ್ ಗಳು 15 ವರ್ಷಗಳನ್ನು ಪೂರ್ಣಗೊಳಿಸಿರುವುದರಿಂದ ಡಬಲ್ ಡೆಕ್ಕರ್ ಬಸ್ ಗಳು ಸೆಪ್ಟಂಬರ್ 15ರಿಂದ ರಸ್ತೆಯಿಂದ ದೂರ ಉಳಿದಿದೆ. ಓಪನ್ ಡೆಕ್ಕ್ ಬಸ್ ಗಳನ್ನು ಅಕ್ಟೋಬರ್ 5ರಿಂದ ಸೇವೆಯಿಂದ ಹಿಂಪಡೆಯಲಾಗುವುದು’’ ಎಂದು ಬೆಸ್ಟ್ ನ ವಕ್ತಾರ ತಿಳಿಸಿದ್ದಾರೆ.