ಪ್ರತಿಪಕ್ಷ ನಾಯಕರಿಗೆ ಹ್ಯಾಕಿಂಗ್ ಎಚ್ಚರಿಕೆ : ಆ್ಯಪಲ್‌ನಿಂದ ಸ್ಪಷ್ಟನೆ ಕೇಳಿದ ಕೇಂದ್ರ

Update: 2024-02-19 17:11 GMT

ಸಾಂದರ್ಭಿಕ ಚಿತ್ರ | Photo: NDTV 

 

ಹೊಸದಿಲ್ಲಿ : ಸರಕಾರಿ ಬೆಂಬಲಿತ ಹ್ಯಾಕರ್‌ಗಳು ಪ್ರತಿಪಕ್ಷ ನಾಯಕರ ಸಾಧನಗಳನ್ನು ಹ್ಯಾಕ್ ಮಾಡುತ್ತಿದ್ದಾರೆ ಎಂದು ಅವರ ಐಫೋನ್‌ಗಳಿಗೆ ರವಾನಿಸಲಾಗಿದ್ದ ಎಚ್ಚರಿಕೆಗಳ ಕುರಿತು ಐಫೋನ್ ತಯಾರಕ ಆ್ಯಪಲ್‌ನಿಂದ ಸ್ಪಷ್ಟ ಉತ್ತರಕ್ಕಾಗಿ ಸರಕಾರವು ಈಗಲೂ ಕಾಯುತ್ತಿದೆ.

ಪ್ರತಿಪಕ್ಷಗಳ ನಾಯಕರ ಐಫೋನ್‌ಗಳು ಸುರಕ್ಷಿತವಾಗಿವೆಯೇ? ಹೌದಾದರೆ ಅವರಿಗೆ ಎಚ್ಚರಿಕೆಗಳನ್ನು ರವಾನಿಸಲು ಕಾರಣಗಳೇನು ಎಂಬ ಎರಡು ಪ್ರಶ್ನೆಗಳನ್ನು ಸರಕಾರವು ಆ್ಯಪಲ್‌ಗೆ ಕೇಳಿದೆ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ ಸಹಾಯಕ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ ಚಂದ್ರಶೇಖರ ಅವರು, ‘ನನ್ನ ವಿನಮ್ರ ಅಭಿಪ್ರಾಯದಲ್ಲಿ ಯಾವುದೇ ಖಾಸಗಿ ಒಡೆತನದ ಸಂಸ್ಥೆಯು ತನ್ನ ಪ್ಲ್ಯಾಟ್‌ಫಾರ್ಮ್‌ನಲ್ಲಿ ದುರ್ಬಲತೆಗಳು ಇವೆ ಎನ್ನುವುದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುವುದಿಲ್ಲ. ನಾವು ಸ್ಪಷ್ಟವಾದ ಪ್ರಶ್ನೆಯನ್ನು ಕೇಳಿದ್ದೇವೆ. ನಿಮ್ಮ ಫೋನ್ ದುರ್ಬಲವಾಗಿದೆಯೇ? ಇದಕ್ಕೆ ಉತ್ತರವು ಸಂಪೂರ್ಣವಾಗಿ ನಿಸ್ಸಂದಿಗ್ಧವಲ್ಲ ’ಎಂದರು.

ಸರಕಾರಿ ಪ್ಯಾಯೋಜಿತ ಹ್ಯಾಕರ್‌ಗಳು ತಮ್ಮ ಫೋನ್‌ಗಳನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆ್ಯಪಲ್ ತಮಗೆ ಎಚ್ಚರಿಕೆಗಳನ್ನು ರವಾನಿಸಿದೆ ಎಂದು ಅಕ್ಟೋಬರ್‌ನಲ್ಲಿ ಹೇಳಿದ್ದ ಹಲವಾರು ಪ್ರತಿಪಕ್ಷಗಳ ನಾಯಕರು,ಸರಕಾರವು ಹ್ಯಾಕಿಂಗ್‌ನಲ್ಲಿ ತೊಡಗಿದೆ ಎಂದು ಆರೋಪಿಸಿದ್ದರು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News