ಹರ್ಯಾಣ ವಿಧಾನಸಭಾ ಚುನಾವಣೆ | ಐಎನ್‌ಎಲ್‌ಡಿ, ಬಿಎಸ್‌ಪಿ ಮೈತ್ರಿ

Update: 2024-07-11 15:58 GMT

PC : PTI 

ಚಂಡೀಗಢ: ಹರ್ಯಾಣದಲ್ಲಿ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ, ತನ್ನ ಮಾಜಿ ಮಿತ್ರಪಕ್ಷ ಬಹುಜನ ಸಮಾಜ ಪಕ್ಷದೊಂದಿಗೆ ಮತ್ತೆ ಕೈಜೋಡಿಸಲು ಭಾರತೀಯ ರಾಷ್ಟ್ರೀಯ ಲೋಕ ದಳ (ಐಎನ್‌ಎಲ್‌ಡಿ) ನಿರ್ಧರಿಸಿದೆ.

ಈ ಏರ್ಪಾಡಿನ ಪ್ರಕಾರ, ರಾಜ್ಯ ವಿಧಾನಸಭೆಯ 90 ಸ್ಥಾನಗಳ ಪೈಕಿ ಬಿಎಸ್‌ಪಿಯು 37ರಲ್ಲಿ ಸ್ಪರ್ಧಿಸಲಿದೆ ಮತ್ತು ಉಳಿದ ಸ್ಥಾನಗಳಲ್ಲಿ ಐಎನ್‌ಎಲ್‌ಡಿ ಸ್ಪರ್ಧಿಸಲಿದೆ ಎಂದು ಚಂಡೀಗಢದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಐಎನ್‌ಎಲ್‌ಡಿ ನಾಯಕ ಅಭಯ್ ಚೌತಾಲಾ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಬಿಎಸ್‌ಪಿಯ ರಾಷ್ಟ್ರೀಯ ಸಮನ್ವಯಕಾರ ಆಕಾಶ್ ಆನಂದ್ ಉಪಸ್ಥಿತರಿದ್ದರು.

ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಯು ಮೂರನೇ ಬಾರಿಗೆ ಅಧಿಕಾರಕ್ಕೆ ಮರಳುವುದನ್ನು ಎದುರು ನೋಡುತ್ತಿದೆ.

2019 ಫೆಬ್ರವರಿಯಲ್ಲಿ, ಐಎನ್‌ಎಲ್‌ಡಿ ಜೊತೆಗಿನ ಸುಮಾರು ಒಂಭತ್ತು ತಿಂಗಳ ಮೈತ್ರಿಯಿಂದ ಬಿಎಸ್‌ಪಿಯು ಹೊರಬಂದಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News