ಹಾಥ್ರಸ್ ಕಾಲ್ತುಳಿತ ಪ್ರಕರಣ| ಸತ್ಸಂಗ ಕಾರ್ಯಕ್ರಮದ ಸಂಘಟಕರು ದುರಂತಕ್ಕೆ ಹೊಣೆ: SIT ವರದಿ

Update: 2024-07-09 07:04 GMT

Photo: PTI

ಲಕ್ನೊ: ಅನುಮತಿ ನೀಡಿದ್ದಕ್ಕಿಂತ ಹೆಚ್ಚು ಜನರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದ ಸತ್ಸಂಗ ಕಾರ್ಯಕ್ರಮದ ಸಂಘಟನಾ ಸಮಿತಿಯೇ 121 ಮಂದಿಯನ್ನು ಬಲಿ ಪಡೆದ ಹಾಥ್ರಸ್ ಕಾಲ್ತುಳಿತ ದುರಂತಕ್ಕೆ ಹೊಣೆಗಾರರು ಎಂದು ತನಿಖೆ ಪ್ರಾರಂಭವಾದ ನಾಲ್ಕು ದಿನಗಳ ನಂತರ ವಿಶೇಷ ತನಿಖಾ ತಂಡ(SIT)ವು ಹೇಳಿದೆ. 90 ಹೇಳಿಕೆಗಳನ್ನು ದಾಖಲಿಸಿಕೊಂಡಿರುವ ತನಿಖಾಧಿಕಾರಿಗಳು ಮಂಗಳವಾರ(ಜುಲೈ 9)ದಂದು ಈ ಸಂಬಂಧ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ANI ಸುದ್ದಿ ಸಂಸ್ಥೆಯ ಪ್ರಕಾರ, ಸತ್ಸಂಗ ಕಾರ್ಯಕ್ರಮದ ಸಂಘಟಕರು ಸಭೆಗೆ ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಂಡಿರಲಿಲ್ಲ ಹಾಗೂ ಘಟನಾ ಸ್ಥಳವನ್ನು ಪರಿಶೀಲಿಸಿರಲಿಲ್ಲ ಎಂದೂ ವಿಶೇಷ ತನಿಖಾ ತಂಡವು ತನ್ನ ವರದಿಯಲ್ಲಿ ಬೆಳಕು ಚೆಲ್ಲಿದೆ ಎನ್ನಲಾಗಿದೆ. ಈ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ.

ಈ ನಡುವೆ, ಸತ್ಸಂಗ ಕಾರ್ಯಕ್ರಮವನ್ನು ಆಯೋಜಿಸಿದ್ದ ಸ್ವಯಂಘೋಷಿತ ದೇವಮಾನವನಾಗಿ ಬದಲಾಗಿದ್ದ ಮಾಜಿ ಪೊಲೀಸ್ ಅಧಿಕಾರಿ ಭೋಲೆ ಬಾಬಾ ಈಗಲೂ ತಲೆ ಮರೆಸಿಕೊಂಡಿದ್ದಾನೆ. ಮುಖ್ಯ ಆರೋಪಿ ದೇವ್ ಪ್ರಕಾಶ್ ಮಧುಕರ್ ದಿಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News