ಫೆಮಾ ಉಲ್ಲಂಘನೆ ಪ್ರಕರಣ: ಹಿರಾನಂದಾನಿ ಸಮೂಹದ ಪ್ರವರ್ತಕರಿಗೆ ಈಡಿ ನೋಟಿಸ್

Update: 2024-02-25 17:20 GMT

Photo: PTI 

ಮುಂಬೈ: ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ ಉಲ್ಲಂಘನೆ ಪ್ರಕರಣದಲ್ಲಿ ಮುಂಬೈ ಮೂಲದ ಪ್ರಮುಖ ರಿಯಲ್ ಎಸ್ಟೇಟ್ ಡೆವಲಪರ್ಸ್ ಹಿರಾನಂದಾನಿ ಸಮೂಹದ ಪ್ರವರ್ತಕರಾದ ನಿರಂಜನ್ ಹಿರಾನಂದಾನಿ ಹಾಗೂ ಅವರ ಪುತ್ರ ದರ್ಶನ್ ಹಿರಾನಂದಾನಿ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.

ಮುಂಬೈಯಲ್ಲಿರುವ ತನ್ನ ಕಚೇರಿಯಲ್ಲಿ ಸೋಮವಾರ ಹಾಜರಾಗುವಂತೆ ಹೀರಾನಂದಾನಿ ಅವರಿಗೆ ಜಾರಿ ನಿರ್ದೇಶನಾಲಯ ಸೂಚಿಸಿದೆ. ಆದರೆ, ಅವರು ತಮ್ಮ ಪ್ರಾಥಮಿಕ ಪ್ರತಿಕ್ರಿಯೆಯನ್ನು ಅಧಿಕೃತ ಪ್ರತಿನಿಧಿಯ ಮೂಲಕ ಸಲ್ಲಿಸುವ ಆಯ್ಕೆಯನ್ನು ಮಾಡಿಕೊಳ್ಳಬಹುದು ಎಂದು ಅದು ಹೇಳಿದೆ.

ದರ್ಶನ್ ಹಿರಾನಂದಾನಿ ಅವರು ಕಳೆದ ಕೆಲವು ವರ್ಷಗಳಿಂದ ದುಬೈಯಲ್ಲಿ ವಾಸಿಸುತ್ತಿದ್ದಾರೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಎಫ್‌ಇಎಂಎ)ಯ ನಿಯಮಗಳ ಅಡಿಯಲ್ಲಿ ಜಾರಿ ನಿರ್ದೇಶನಾಲಯ ಕಳೆದ ವಾರ ಮುಂಬೈ ಸುತಮುತ್ತ ಇರುವ ಹಿರಾನಂದಾನಿ ಸಮೂಹದ ನಾಲ್ಕು ಸ್ಥಳಗಳಲ್ಲಿ ದಾಳಿ ನಡೆಸಿತ್ತು.

ಕೆಲವು ವಿದೇಶಿ ವಹಿವಾಟುಗಳ ಹೊರತಾಗಿ, ಹಿರಾನಂದಾನಿ ಸಮೂಹದ ಪ್ರವರ್ತಕರೊಂದಿಗೆ ನಂಟು ಹೊಂದಿದ ಎಂದು ಆರೋಪಿಸಲಾದ ಬ್ರಿಟಿಷ್ ವರ್ಜಿನ್ ಐಲ್ಯಾಂಡ್ (ಬಿವಿಐ) ಮೂಲದ ಟ್ರಸ್ಟ್‌ನ ಫಲಾನುಭವಿಗಳನ್ನು ತನಿಖೆ ನಡೆಸಲಾಗುತ್ತಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಎಫ್‌ಇಎಂಎ)ಗೆ ಸಂಬಂಧಿಸಿದ ತನಿಖೆಗೆ ಜಾರಿ ನಿರ್ದೇಶನಾಲಯದೊಂದಿಗೆ ಸಹಕರಿಸಲಿದ್ದೇವೆ ಎಂದು ಹಿರಾನಂದಾನಿ ಸಮೂಹ ತಿಳಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News