"ಪೊಳ್ಳು ಪ್ರಣಾಳಿಕೆ": ಬಿಜೆಪಿಯ ಚುನಾವಣಾ ಪ್ರಣಾಳಿಕೆಗೆ ವಿಪಕ್ಷಗಳ ಟೀಕೆ
ಹೊಸದಿಲ್ಲಿ: ಬಿಜೆಪಿಯ ಚುನಾವಣಾ ಪ್ರಣಾಳಿಕೆಯನ್ನು ಕಾಂಗ್ರೆಸ್ ಸೇರಿದಂತೆ ಪ್ರಮುಖ ಪ್ರತಿಪಕ್ಷಗಳು ಕಟುವಾಗಿ ಟೀಕಿಸಿವೆ. ಇದೊಂದು ಪೊಳ್ಳು ಪ್ರಣಾಳಿಕೆಯಾಗಿದ್ದು, ಉದ್ಯೋಗ ಸೃಷ್ಟಿ ಹಾಗೂ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಿಕೆ ಕುರಿತಂತೆ ಹಲವಾರು ಪ್ರಮುಖ ವಿಷಯಗಳ ಬಗ್ಗೆ ಮೌನತಾಳಿದೆ ಎಂದು ಅವು ಹೇಳಿವೆ.
ಬಿಜೆಪಿಯ ಚುನಾವಣಾ ಪ್ರಣಾಳಿಕೆಯು 30 ಲಕ್ಷ ಉದ್ಯೋಗಗಳ ಸೃಷ್ಟಿ, ಹಣದುಬ್ಬರ ನಿಯಂತ್ರಣ, ಮಣಿಪುರದಲ್ಲಿ ಶಾಂತಿಯ ಮರುಸ್ಥಾಪನೆ ಹಾಗೂ ಲಡಾಕ್ ನ ಬುಡಕಟ್ಟು ಪ್ರದೇಶಗಳನ್ನು ಸಂವಿಧಾನದ ಆರನೇ ಪರಿಚ್ಚೇದದಲ್ಲಿ ಸೇರ್ಪಡೆಗೊಳಿಸುವ ವಿಚಾರಗಳ ಬಗ್ಗೆ ಚಕಾರವೆತ್ತಿಲ್ಲವೆಂದು ಕಾಂಗ್ರೆಸ್ ಬೆಟ್ಟು ಮಾಡಿದೆ.
ಕಾಂಗ್ರೆಸ್ ನ ಚುನಾವಣಾ ಪ್ರಣಾಳಿಕೆಯು ವಾರ್ಷಿಕವಾಗಿ 1 ಲಕ್ಷ ರೂ. ಮಹಿಳೆಯರಿಗೆ ನೀಡುವ ಖಾತರಿಯನ್ನು ಕೊಟ್ಟಿದೆ. ಆದರೆ ನಿಮ್ಮ (ಬಿಜೆಪಿ) ಚುನಾವಣಾ ಪ್ರಣಾಳಿಕೆ ಆ ಬಗ್ಗೆ ಮೌನವಾಗಿದೆ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನೇತ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಬಿಜೆಪಿಯ ದೋಷಪೂರಿತ ವಿದೇಶಾಂಗ ನೀತಿಯ ಪರಿಣಾಮವಾಗಿ 2014ರಿಂದೀಚೆಗೆ ಚೀನಾವು ಭಾರತದ ಭೂಪ್ರದೇಶವನ್ನು ಪ್ರವೇಶಿಸುತ್ತಲೇ ಇದೆ. ವಿಶ್ವವಾಣಿಜ್ಯ ಹಾಗೂ ವಿದೇಶಿ ನೇರ ಹೂಡಿಕೆಯನ್ನು ಬಂಡವಾಳೀಕರಣಗೊಳಿಸಲು ಭಾರತವು ವಿಫಲವಾಗಿದೆ ಎಂದು ಆಕೆ ಹೇಳಿದ್ದಾರೆ.
ರೈತರಿಗೆ ವಾರ್ಷಿಕವಾಗಿ 6 ಸಾವಿರ ರೂ. ಕನಿಷ್ಠ ಆದಾಯದ ಬೆಂಬಲವನ್ನು ಒದಗಿಸುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ಭೂರಹಿತ ಕಾರ್ಮಿಕರಿಗೆ ತಲುಪುತ್ತಿಲ್ಲವೆಂದು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಸಮಿತಿ ಸದಸ್ಯೆ ಅಮಿತಾಬ್ ದುಬೆ ಹೇಳಿದ್ದಾರೆ.
ದೇಶದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲುವ ಬಿಜೆಪಿ ವಿಫಲವಾಗಿದೆ ಎಂದವರು ಟೀಕಿಸಿದರು. ಶೇ.50ಕ್ಕಿಂತಲೂ ಕಡಿಮೆ ವಿದ್ಯಾರ್ಥಿಗಳು ಕಡಿಮೆ ಕಲಿಕಾ ಗುಣಮಟ್ಟವನ್ನು ಹೊಂದಿದ್ದಾರೆ ಎಂಬುದನ್ನು ಶಿಕ್ಷಣ ಸಚಿವಾಲಯದ ನಿರ್ವಹಣಾ ಗ್ರೇಡಿಂಗ್ ಸೂಚ್ಯಂಕಗಳೇ ಬಹಿರಂಗಪಡಿಸಿವೆ ಎಂದರು.
ದೇಶವನ್ನು ಕಾಡುವ ಬಡತನ, ನಿರುದ್ಯೋಗ ಹಾಗೂ ಹಣದುಬ್ಬರವನ್ನು ಬಗೆಹರಿಸಲು ಯಾವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂಬ ಬಗ್ಗೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ವಿವರಿಸಿಲ್ಲವೆಂದು ಯಾದವ್ ಹೇಳಿದರು.
ರೈತರಿಗೆ ಕನಿಷ್ಠ ಬೆಂಬಲ ದರವನ್ನು ಒದಗಿಸುವ ಬಗ್ಗೆ ಬಿಜೆಪಿಯು ಯಾವುದೇ ಭರವಸೆಗಳನ್ನು ನೀಡಿಲ್ಲ.ತನ್ನ ಭರವಸೆಗಳಿಂದ ಹಿಂದೆ ಸರಿಯುವ ಮೂಲಕ ದಿಲ್ಲಿ ಸಚಿವೆ, ಆತಿಷಿ ಟೀಕಿಸಿದ್ದಾರೆ.