ಹಗೆತನದಿಂದ ಯಾರಿಗೂ ಪ್ರಯೋಜನವಿಲ್ಲ : ಯುದ್ಧ ನಿಲುಗಡೆಗೆ ಕರೆ ನೀಡಿದ ಭಾರತ

Update: 2024-10-26 16:32 GMT

Credit: Reuters Photo

ಹೊಸದಿಲ್ಲಿ : ಪಶ್ಚಿಮ ಏಶ್ಯ ಪ್ರಾಂತ್ಯದಲ್ಲಿ ಹೆಚ್ಚಳವಾಗುತ್ತಿರುವ ಉದ್ವಿಗ್ನತೆಯಿಂದ ನಾವು ತೀವ್ರ ಕಳವಳಕ್ಕೀಡಾಗಿದ್ದು, ಉಭಯ ದೇಶಗಳು ಸಂಘರ್ಷದಿಂದ ದೂರ ಉಳಿದು, ಮಾತುಕತೆ ಹಾಗೂ ರಾಜತಾಂತ್ರಿಕ ಮಾರ್ಗಗಳಿಗೆ ಮರಳಬೇಕು ಎಂದು ಭಾರತ ಕರೆ ನೀಡಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, “ಈ ಪ್ರಾಂತ್ಯದಲ್ಲಿನ ಭಾರತೀಯ ಸಮುದಾಯದೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ” ಎಂದು ಹೇಳಿದೆ.

ಶನಿವಾರ ಇರಾನ್ ನ ಸೇನಾ ನೆಲೆಗಳ ಮೇಲೆ ಇಸ್ರೇಲ್ ದಾಳಿ ನಡೆಸಿರುವುದರಿಂದ, ಈ ಪ್ರಾಂತ್ಯದಲ್ಲಿ ಎರಡು ದೇಶಗಳ ನಡುವೆ ಪೂರ್ಣ ಪ್ರಮಾಣದ ಯುದ್ಧ ನಡೆಯುವ ಭೀತಿ ಎದುರಾಗಿರುವ ಬೆನ್ನಿಗೇ ಭಾರತದಿಂದ ಈ ಹೇಳಿಕೆ ಹೊರ ಬಿದ್ದಿದೆ.

“ಎಲ್ಲ ಸಂಬಂಧಿತ ದೇಶಗಳು ಸಂಘರ್ಷದಿಂದ ದೂರ ಉಳಿದು, ಮಾತುಕತೆ ಹಾಗೂ ರಾಜತಾಂತ್ರಿಕ ಮಾರ್ಗಕ್ಕೆ ಮರಳಬೇಕು ಎಂಬ ನಮ್ಮ ಆಗ್ರಹವನ್ನು ಪುನರುಚ್ಚರಿಸುತ್ತಿದ್ದೇವೆ. ಮುಗ್ಧ ಒತ್ತೆಯಾಳುಗಳು ಹಾಗೂ ನಾಗರಿಕರು ತೊಂದರೆಗೊಳಗಾಗುತ್ತಿರುವಾಗಲೂ ಮುಂದುವರಿದಿರುವ ಹಗೆತನದಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ” ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಶುಕ್ರವಾರ ಜರ್ಮನ್ ಚಾನ್ಸಲರ್ ಒಲಾಫ್ ಸ್ಕಾಲ್ಝ್ ರೊಂದಿಗೆ ಪ್ರಧಾನಿ ನರೇಂದ್ರ ಮೋದಿ ನಡೆಸಿದ ಮಾತುಕತೆಯ ಸಂದರ್ಭದಲ್ಲಿ ಪಶ್ಚಿಮ ಏಶ್ಯ ಬಿಕ್ಕಟ್ಟನ್ನು ವಿಸ್ತೃತವಾಗಿ ಚರ್ಚಿಸಲಾಯಿತು ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News