ಪತ್ನಿ ಮಕ್ಕಳನ್ನು ಕೂಡಿಹಾಕಿ ಮನೆಗೆ ಬೆಂಕಿ ಹಚ್ಚಿದ ಪತಿ: ಮೂವರು ಸಜೀವ ದಹನ

Update: 2024-03-26 04:33 GMT

ನಾಸಿಕ್: ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಮನೆಯಲ್ಲಿ ಕೂಡಿ ಹಾಕಿ, ಮನೆಗೆ ಬೆಂಕಿ ಹಚ್ಚಿ ಅವರನ್ನು ಜೀವಂತವಾಗಿ ದಹಿಸಿದ ಪೈಶಾಚಿಕ ಘಟನೆ ಅಹ್ಮದ್ನಗರ ಜಿಲ್ಲೆಯ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಪೊಲೀಸರು ಸುನೀಲ್ ಲಾಂಡ್ಗೆ ಎಂಬ ಆರೋಪಿಯನ್ನು ಈ ಸಂಬಂಧ ಬಂಧಿಸಿದ್ದಾರೆ. ಪಿಂಪಲ್ ಗಾಂವ್ ಲಂಡ್ಗಾ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತಪಟ್ಟವರನ್ನು ಪತ್ನಿ ಲಲಿತಾ (35), ಪುತರಿ ಸಾಕ್ಷಿ (14) ಹಾಗೂ ಒಂದು ವರ್ಷದ ಮಗಳು ಖುಷಿ ಎಂದು ಗುರುತಿಸಲಾಗಿದೆ. ಮೂವರ ದೇಹಗಳೂ ಸುಟ್ಟು ಕರಕಲಾಗಿದ್ದವು.

"ಬೆಳಿಗ್ಗೆ 10.30ರ ಸುಮಾರಿಗೆ ಸುನೀಲ್ ಲಾಂಡ್ಗೆ ಮನೆಯ ಹೊರಗಿನಿಂದ ಚಿಲಕ ಹಾಕಿ ಕಿಟಕಿ ಮೂಲಕ ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಹಚ್ಚಿದ್ದಾನೆ. ಒಳಗೆ ಸಿಕ್ಕಿಹಾಕಿಕೊಂಡ ಮಹಿಳೆ ಮತ್ತು ಮಕ್ಕಳ ಚೀರಾಟ ಕೇಳಿ ಅಕ್ಕಪಕ್ಕದವರು ಧಾವಿಸುವ ವೇಳೆ ಮನೆ ಹೊತ್ತಿ ಉರಿಯಲಾರಂಭಿಸಿತ್ತು: ಎಂದು ಸಹಾಯಕ ಇನ್ಸ್ಪೆಕ್ಟರ್ ಪ್ರಹ್ಲಾದ್ ಗೀತ್ ಹೇಳಿದ್ದಾರೆ.

ಆರೋಪಿ ಸುನಿಲ್ ಪೊಲೀಸರು ಬರುವವರೆಗೂ ಆ ಸ್ಥಶಳದಲ್ಲೇ ಇದ್ದ. ಸುನೀಲ್ಗೆ ಇತರ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಇದ್ದು, ಇವರು ಆರೋಪಿಯ ಅಣ್ಣ ಹಾಗೂ ತಾಯಿಯ ಜತೆಗೆ ಸುಮಾರು 100 ಮೀಟರ್ ದೂರದಲ್ಲಿ ವಾಸವಿದ್ದಾರೆ.

ಪತ್ನಿಯ ಚಾರಿತ್ರ್ಯವನ್ನು ಅನುಮಾನಿಸಿ ಆರೋಪಿ ಸದಾ ಆಕೆಯನ್ನು ಹೊಡೆಯುತ್ತಿದ್ದ ಎನ್ನಲಾಗಿದೆ. ಶನಿವಾರ ರಾತ್ರಿ ಸುನೀಲ್ ಪತ್ನಿಯ ಜತೆ ಜಗಳವಾಡಿದ್ದ. ಮೂವರನ್ನೂ ಮನೆಯಲ್ಲಿ ಕೂಡಿ ಹಾಕಿ ಜಗಳದ ಬಗ್ಗೆ ಹೇಳಲು ಸಂಬಂಧಿಕರ ಮನೆಗೆ ತೆರಳಿದ್ದ. ಆದರೆ ಯಾರೂ ಈತನ ಆರೋಪವನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ ಎಂದು ಗ್ರಾಮಸ್ಥರು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News