ನಾನು ಮಾಜಿ ಸಿಎಂ, ತಿರಸ್ಕೃತ ಸಿಎಂ ಅಲ್ಲ: ಶಿವರಾಜ್ ಸಿಂಗ್ ಚೌಹಾಣ್
ಭೋಪಾಲ್: “ನನ್ನನ್ನು ಈಗ ಮಾಜಿ ಮುಖ್ಯಮಂತ್ರಿ ಎಂದು ಕರೆಯಲಾಗುತ್ತದೆ, ಆದರೆ ನಾನು ತಿರಸ್ಕೃತ ಮುಖ್ಯಮಂತ್ರಿಯಲ್ಲ. ಅಧಿಕಾರದಲ್ಲಿ ದೀರ್ಘ ಸಮಯದಲ್ಲಿದ್ದುದಕ್ಕಾಗಿ ಜನರಿಂದ ನಿಂದನೆಗೊಳಗಾದಾಗ ಹಲವು ಬಾರಿ ಮುಖ್ಯಮಂತ್ರಿಗಳು ಹುದ್ದೆ ತೊರೆಯುತ್ತಾರೆ. ಆದರೆ ಮುಖ್ಯಮಂತ್ರಿ ಹುದ್ದೆ ತೊರೆದ ನಂತರವೂ ಜನರು ನಾನು ಹೋದಲ್ಲೆಲ್ಲಾ “ಮಾಮಾ” ಎಂದು ಕರೆಯುತ್ತಾರೆ. ಜನರ ಪ್ರೀತಿಯೇ ನನ್ನ ನಿಜವಾದ ಸಂಪತ್ತು,” ಎಂದು ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ
ಪುಣೆಯಲ್ಲಿ ಸರ್ಕಾರಿ ಎಂಐಟಿ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. “ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಮಾತ್ರಕ್ಕೆ ನಾನು ಸಕ್ರಿಯ ರಾಜಕಾರಣ ತೊರೆಯುತ್ತೇನೆ ಎಂದೇನಿಲ್ಲ. ನಾನು ಯಾವುದೇ ಹುದ್ದೆಗಾಗಿ ರಾಜಕಾರಣದಲ್ಲಿಲ್ಲ, ಜನರ ಸೇವೆಗಾಗಿ ಇದ್ದೇನೆ,” ಎಂದು ಅವರು ಹೇಳಿದ್ದಾರೆ.
“ನಾನು ಅಹಂಕಾರದ ಭಾಷೆ ಮಾತನಾಡುವುದಿಲ್ಲ. ನಾನು 11 ಚುನಾವಣೆ ಗೆದ್ದಿದ್ದೇನೆ, ಆದರೆ ನನಗಾಗಿ ಪ್ರಚಾರ ಮಾಡುವುದಿಲ್ಲ. ನಾಮಪತ್ರ ಸಲ್ಲಿಕೆಗೆ ಒಂದು ದಿನ ಮುನ್ನ ಕ್ಷೇತ್ರಕ್ಕೆ ತೆರಳುತ್ತೇನೆ. ಆಗ ಅಲ್ಲಿನ ಜನರು ಹಣ ಮತ್ತು ಅದನ್ನು ದೇಣಿಗೆ ನೀಡಿದವರ ಪಟ್ಟಿಯೊಂದಿಗೆ ಬರುತ್ತಾರೆ. ಪ್ರಾಮಾಣಿಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದರೆ, ಜನರು ಖಂಡಿತಾ ಬೆಂಬಲಿಸುತ್ತಾರೆ,” ಎಂದು ಅವರು ಹೇಳಿದರು.