ಶರದ್ ಪವಾರ್ ಅವರ ಸುದೀರ್ಘ ವಿಶ್ವಾಸದ್ರೋಹ ರಾಜಕಾರಣಕ್ಕೆ ಅಂತ್ಯವಾಡಿದ ಮಹಾರಾಷ್ಟ್ರ ಚುನಾವಣಾ ಫಲಿತಾಂಶ: ಅಮಿತ್ ಶಾ

Update: 2025-01-12 15:08 GMT

ಅಮಿತ್ ಶಾ | PC : PTI 

ಶಿರಡಿ: 1978ರಿಂದ ಹಿರಿಯ ರಾಜಕಾರಣಿ ಶರದ್ ಪವಾರ್ ಮಾಡಿಕೊಂಡು ಬಂದಿದ್ದ ಸುದೀರ್ಘ ಕಾಲದ ದ್ರೋಹ ಹಾಗೂ ವಿಶ್ವಾಸ ಘಾತುಕತನ ರಾಜಕಾರಣವು ಮಹಾರಾಷ್ಟ್ರದಲ್ಲಿ ಸುಭದ್ರ ಸರಕಾರ ರಚಿಸುವ ಆಶ್ವಾಸನೆ ನೀಡಿದ್ದ ಬಿಜೆಪಿ ಪರವಾಗಿ ಭಾರಿ ಗೆಲುವು ದೊರೆತಿದ್ದರಿಂದ ಅಂತ್ಯಗೊಂಡಿದೆ ಎಂದು ರವಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಮಹಾರಾಷ್ಟ್ರದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಬಾರಿಯ ಚುನಾವಣೆಯಲ್ಲಿ ವಂಶಪಾರಂಪರ್ಯ ಹಾಗೂ ವಿಶ್ವಾಸ ದ್ರೋಹ ರಾಜಕಾರಣ ಮಾಡಿದ್ದ ಎನ್ಸಿಪಿ (ಎಸ್ಪಿ)ಯನ್ನು ಮುನ್ನಡೆಸುತ್ತಿರುವ ಶರದ್ ಪವಾರ್ ಹಾಗೂ ಶಿವಸೇನೆ (ಉದ್ಧವ್ ಬಣ) ನಾಯಕ ಉದ್ಧವ್ ಠಾಕ್ರೆಗೆ ಮಹಾರಾಷ್ಟ್ರದ ಜನರು ಅವರ ಸ್ಥಾನವನ್ನು ತೋರಿಸಿದ್ದಾರೆ ಎಂದು ಅಭಿಪ್ರಾಯ ಪಟ್ಟರು.

ದಿಲ್ಲಿ, ಪಶ್ಚಿಮ ಬಂಗಾಳ, ಬಿಹಾರ ಹಾಗೂ ಮಹಾರಾಷ್ಟ್ರಗಳಲ್ಲಿ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಉಲ್ಲೇಖಿಸಿದ ಅಮಿತ್ ಶಾ, ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟದ ಪತನ ಪ್ರಾರಂಭಗೊಂಡಿದೆ ಎಂದು ಭವಿಷ್ಯ ನುಡಿದರು.

“ಶರದ್ ಪವಾರ್ 1978ರಲ್ಲಿ ಮಹಾರಾಷ್ಟ್ರದಲ್ಲಿ ಪ್ರಾರಂಭಿಸಿದ ದ್ರೋಹ ಹಾಗೂ ವಿಶ್ವಾಸಘಾತುಕತನ ರಾಜಕಾರಣವನ್ನು 2024ರಲ್ಲಿ ಜನ ತಿರಸ್ಕರಿಸಿದರು. ಅದೇ ರೀತಿ, ಉದ್ಧವ್ ಠಾಕ್ರೆಯವರ ವಂಶಪಾರಂಪರ್ಯ ಹಾಗೂ ವಿಶ್ವಾಸ ದ್ರೋಹವನ್ನೂ ತಿರಸ್ಕರಿಸಿದರು. 2024ರ ಚುನಾವಣೆಯಲ್ಲಿ ಶರದ್ ಪವಾರ್ ಹಾಗೂ ಉದ್ಧವ್ ಠಾಕ್ರೆಗೆ ಜನರು ಅವರ ಜಾಗಗಳನ್ನು ತೋರಿಸಿದ್ದಾರೆ” ಎಂದು ಅವರು ವ್ಯಂಗ್ಯವಾಡಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News