ಪುರುಷರಿಗಾಗಿ ಗರ್ಭನಿರೋಧಕ ಇಂಜೆಕ್ಷನ್!

Update: 2023-10-19 18:02 GMT

Photo : newindianexpress

ಹೊಸದಿಲ್ಲಿ: ಜಗತ್ತಿನಲ್ಲೇ ಪ್ರಪ್ರಥಮ ಬಾರಿಗೆ ಪುರುಷರಿಗೆ ನೀಡುವ ಗರ್ಭನಿರೋಧಕ ಚುಚ್ಚುಮದ್ದಿನ ಕ್ಲಿನಿಕಲ್ ಪ್ರಾಯೋಗಿಕ ಪರೀಕ್ಷೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಚುಚ್ಚುಮದ್ದು ಅತ್ಯಂತ ಸುರಕ್ಷಿತವಾಗಿದ್ದು ಯಾವುದೇ ಗಂಭೀರವಾದ ಅಡ್ಡಪರಿಣಾಮಗಳನ್ನು ಹೊಂದಿಲ್ಲವೆಂದು ಪರೀಕ್ಷಾ ಫಲಿತಾಂಶಗಳು ದೃಢಪಡಿಸಿವೆ.

ಹೊಸದಿಲ್ಲಿಯ ಐಸಿಎಂಆರ್ ನ ಸಮನ್ವಯತೆಯಲ್ಲಿ ನಡೆಸಲಾದ ಈ ಪುರುಷ ಗರ್ಭನಿರೋಧಕ ಚುಚ್ಚುಮದ್ದಿನ ಮೂರನೇ ಹಂತದ ಕ್ಲಿನಿಕಲ್ ಪರೀಕ್ಷೆಗಳನ್ನು ಹೊಸದಿಲ್ಲಿ, ಉದಂಪುರ, ಲೂಧಿಯಾನ,ಜೈಪುರ ಹಾಗೂ ಖರಗಪುರಗಳಲ್ಲಿ ನಡೆಸಲಾಗಿತ್ತು. ಮೂರನೇ ಹಂತದ ಕ್ಲಿನಿಕಲ್ ಪರೀಕ್ಷೆಗೆ ಭಾರತೀಯ ಡ್ರಗ್ಸ್ ಕಂಟ್ರೋಲರ್ ಜನರಲ್ ಇಂಡಿಯಾ (ಡಿಜಿಸಿಐ) ಅನುಮತಿ ನೀಡಿದ್ದು, ಅದಕ್ಕೆ ಆಯಾ ಕೇಂದ್ರಗಳಲ್ಲಿನ ಸಾಂಸ್ಥಿಕ ನೈತಿಕ ಸಮಿತಿಗಳು ಅನುಮೋದನೆ ನೀಡಿದ್ದವು.

ಈ ಅಧ್ಯಯನದ ಭಾಗವಾಗಿ ಪುರುಷ ಸಂತಾನಹರಣ ಶಸ್ತ್ರಕ್ರಿಯೆಗಾಗಿ ಕುಟುಂಬ ಯೋಜನಾ ಕ್ಲಿನಿಕ್ ಹಾಗೂ ಮೂತ್ರಾಂಗ ವಿಭಾಗಕ್ಕೆ ಅಥವಾ 303 ಆರೋಗ್ಯಕರ, ಲೈಂಗಿಕವಾಗಿ ಸಕ್ರಿಯವಾಗಿರುವ ಹಾಗೂ ವಿವಾಹಿತ ಪುರುಷರು ಹಾಗೂ ಅವರ ಆರೋಗ್ಯವಂತ ಹಾಗೂ ಲೈಂಗಿಕವಾಗಿ ಸಕ್ರಿಯವಾಗಿರುವ ಪತ್ನಿಯರನ್ನು ಗುರುತಿಸಲಾಗಿತ್ತು.

ಕ್ಲಿನಿಕಲ್ ಪರೀಕ್ಷೆಯಲ್ಲಿ ಪಾಲ್ಗೊಂಡ ಪುರುಷರಿಗೆ 60 ಮಿ.ಗ್ರಾಂ.ನ ಆರ್ಐಎಸ್ಯುಜಿ ಇಂಜೆಕ್ಷನ್ ಅನ್ನು ಚುಚ್ಚಲಾಗಿತ್ತು. ಆರ್ಐಎಸ್ಯುಜಿ ಚುಚ್ಚುಮದ್ದಿನ ಒಟ್ಟಾರೆ ಪರಿಣಾಮಕಾರಿತ್ವವು 97.03 ಶೇಕಡ ಆಗಿದೆ ಹಾಗೂ ಯಾವುದೇ ಗಂಭೀರ ಅಡ್ಡಪರಿಣಾಮಗಳಿಲ್ಲದೆ ಗರ್ಭಧಾರಣೆ ತಡೆಗಟ್ಟುವಿಕೆಯು ಶೇ.99.02 ಆಗಿದೆಯೆಂದು ಅಧ್ಯಯನ ವರದಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News