ಭಾರತ-ಸೌದಿ ಅರೇಬಿಯಾ ಜಂಟಿ ಸೇನಾಭ್ಯಾಸ ರಾಜಸ್ಥಾನದಲ್ಲಿ ಪ್ರಾರಂಭ

Update: 2024-01-29 17:56 GMT

Photo: NDTV 

ಹೊಸದಿಲ್ಲಿ: ಉಭಯ ಸೇನಾಪಡೆಗಳ ನಡುವೆ ಪರಸ್ಪರ ಕಾರ್ಯಸಾಧ್ಯತೆ, ಸ್ನೇಹ ಹಾಗೂ ಸೌಹಾರ್ದತೆಯನ್ನು ವೃದ್ಧಿಸುವ ಭಾಗವಾಗಿ ಭಾರತ-ಸೌದಿ ಅರೇಬಿಯಾ ನಡುವಿನ ಉದ್ಘಾಟನಾ ಆವೃತ್ತಿಯಾದ ‘ಸದಾ ತನ್ಸೀಕ್’ ಯುದ್ಧಾಭ್ಯಾಸವು ಸೋಮವಾರ ರಾಜಸ್ಥಾನದಲ್ಲಿ ಪ್ರಾರಂಭಗೊಂಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಯುದ್ಧಾಭ್ಯಾಸವು ಫೆಬ್ರವರಿ 10ರವರೆಗೆ ಮುಂದುವರಿಯಲಿದೆ. “45 ಸಿಬ್ಬಂದಿಗಳನ್ನು ಹೊಂದಿರುವ ಸೌದಿ ಅರೇಬಿಯಾ ತುಕಡಿಯು ರಾಯಲ್ ಸೌದಿ ಲ್ಯಾಂಡ್ ಫೋರ್ಸಸ್ ಅನ್ನು ಪ್ರತಿನಿಧಿಸುತ್ತಿದೆ. ಭಾರತೀಯ ಸೇನೆಯ ತುಕಡಿಯೂ 45 ಸಿಬ್ಬಂದಿಗಳನ್ನು ಹೊಂದಿದ್ದು, ಈ ತುಕಡಿಯು ಬ್ರಿಗೇಡ್ ಆಫ್ ಗಾರ್ಡ್ಸ್(ಮೆಕಾನೈಸ್ಡ್ ಇನ್ ಫ್ಯಾಂಟ್ರಿ)ಯನ್ನು ಪ್ರತಿನಿಧಿಸುತ್ತಿದೆ” ಎಂದು ರಕ್ಷಣಾ ಸಚಿವಾಲಯವು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ವಿಶ್ವ ಸಂಸ್ಥೆಯ ಸನ್ನದಿನ ಅಧ್ಯಾಯ ಏಳರನ್ವಯ ಅರೆ ಮರಳುಗಾಡಿನಲ್ಲಿ ಉಭಯ ಸೇನಾ ಪಡೆಗಳಿಗೆ ಜಂಟಿ ಕಾರ್ಯಾಚರಣೆ ತರಬೇತಿ ನೀಡುವುದು ಈ ಯುದ್ಧಾಭ್ಯಾಸದ ಗುರಿಯಾಗಿದೆ ಎಂದು ಆ ಪ್ರಕಟಣೆಯಲ್ಲಿ ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News