ಏರಿಕೆ ಕಂಡ ಮುಸ್ಲಿಮರ ಜನಸಂಖ್ಯೆ, ಹಿಂದೂಗಳ ಸಂಖ್ಯೆ ಕುಸಿತ | ಪ್ರಧಾನಿಯ ಆರ್ಥಿಕ ಸಲಹಾ ಮಂಡಳಿ ವರದಿ

Update: 2024-05-09 13:17 GMT

Photo : wionews

ಹೊಸದಿಲ್ಲಿ : ಪ್ರಧಾನಮಂತ್ರಿಯವರ ಆರ್ಥಿಕ ಸಲಹಾ ಮಂಡಳಿಯ(ಇಎಸಿ-ಪಿಎಂ) ಸಲ್ಲಿಸಿದ ವರದಿಯಲ್ಲಿ 1950 ರಿಂದ 2015ರ ಅವಧಿಯಲ್ಲಿ ಹಿಂದೂಗಳ ಜನಸಂಖ್ಯೆಯು ಶೇ.7.82 ಕುಸಿದಿದ್ದರೆ, ಮುಸ್ಲಿಮರ ಜನಸಂಖ್ಯೆ ಶೇ. 43.15 ರಷ್ಟು ಏರಿಕೆಯಾಗಿದೆ ಎಂದು ಸೂಚಿಸಿದೆ.

ಜೈನ ಧರ್ಮದ ಜನಸಂಖ್ಯೆಯು ಭಾರತದಲ್ಲಿ 1950-2015ರ ಅವಧಿಯಲ್ಲಿ ಶೇ. 0.45 ರಿಂದ ಶೇ.0.36 ಕ್ಕೆ ಕಡಿಮೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಅವಧಿಯಲ್ಲಿ ಹಿಂದೂಗಳ ಜನಸಂಖ್ಯೆಯು ಶೇ. 84.68 ರಿಂದ ಶೇ. 78.06ಕ್ಕೆ ಇಳಿದಿದೆ. ಮುಸ್ಲಿಮರ ಜನಸಂಖ್ಯೆ ಶೇ. 9.84 ರಿಂದ ಶೇ. 14.09ಕ್ಕೆ ಏರಿಕೆಯಾಗಿದೆ. ಅಂದರೆ ಹಿಂದೂಗಳ ಸಂಖ್ಯೆ ಶೇ.7.82 ಇಳಿಕೆಯಾಗಿದ್ದರೆ, ಮುಸ್ಲಿಮರ ಜನಸಂಖ್ಯೆಯು ಶೇ.43.15 ರಷ್ಟು ಏರಿಕೆಯಾಗಿದೆ ಎಂದು ಇಎಸಿ-ಪಿಎಂ ಮಂಡಳಿಯ ಮುಖ್ಯಸ್ಥರಾದ ಶಮಿಕ ರವಿ ತಿಳಿಸಿದ್ದಾರೆ.

ವರದಿಯತೆ ಕ್ರೈಸ್ತರ ಜನಸಂಖ್ಯೆ ಶೇ. 2.24 ರಿಂದ ಶೇ. 2.36 ವರೆಗೆ ಏರಿಕೆಯಾಗಿದೆ. ಸಿಖ್ಖರ ಜನಸಂಖ್ಯೆ ಶೇ.24 ರಷ್ಟು ಏರಿಕೆಯಾಗಿದೆ. ಪಾರ್ಸಿ ಜನಸಂಖ್ಯೆ ಶೇ. 85 ರಷ್ಟು ಕುಸಿತ ಕಂಡಿದೆ ಎಂದು ವರದಿ ತಿಳಿಸಿದೆ.

ಇದು ಭಾರತದಲ್ಲಿ ವೈವಿದ್ಯತೆಯನ್ನು ಬೆಳಸಲು ಉತ್ತಮ ವಾತಾವರಣವಿದೆ ಎಂಬುದನ್ನು ಸೂಚಿಸುತ್ತದೆ. ತಳಮಟ್ಟದ ವಿಧಾನದ ಮೂಲಕ ಪೌಷ್ಟಿಕ ವಾತಾರಣ ಹಾಗೂ ಸಾಮಾಜಿಕ ಬೆಂಬಲ ಒದಗಿಸದೆ ಅನುಕೂಲ ವಂಚಿತ ಸಮಾಜಗಳ ಉತ್ತಮ ಜೀವನ ಮಟ್ಟವನ್ನು ಉತ್ತೇಜಿಸಲು ಸಾಧ್ಯವಿಲ್ಲ ಎಂದು ಅಂಕಿಅಂಶಗಳಲ್ಲಿ ತಿಳಿಸಲಾಗಿದೆ.

ಹಿಂದೂಗಳ ಜನಸಂಖ್ಯೆಯ ಇಳಿಕೆ ಹಾಗೂ ಅಲ್ಪಸಂಖ್ಯಾತರ ಗಮನಾರ್ಹ ಏರಿಕೆಗೆ ನೀತಿ ನಿರೂಪಣೆಗಳು, ರಾಜಕೀಯ ನಿರ್ಧಾರಗಳು ಹಾಗೂ ಸಾಮಾಜಿಕ ಪ್ರಕ್ರಿಯೆಗಳು ಪ್ರಮುಖ ಕಾರಣ ಎಂದು ತಿಳಿಸಲಾಗಿದೆ.

ಮಾಲ್ಡೀವ್ಸ್‌ ಹೊರತುಪಡಿಸಿ ಉಳಿದ ದಕ್ಷಿಣ ಏಷ್ಯಾದ ಮುಸ್ಲಿಂ ಬಾಹುಳ್ಯ ದೇಶಗಳಲ್ಲಿ ಅಲ್ಲಿನ ಪ್ರಮುಖ ಧಾರ್ಮಿಕ ಜನಸಂಖ್ಯೆ ಏರಿಕೆಗೊಂಡಿದೆ. ಅದೇ ರೀತಿ ಹಿಂದೂಗಳು ಹೆಚ್ಚಿರುವ ಭೂತಾನ್‌ ಹಾಗೂ ಬೌದ್ಧರು ಪ್ರಾಬಲ್ಯದ ಶ್ರೀಲಂಕಾದಲ್ಲಿ ಪ್ರಮುಖ ಧಾರ್ಮಿಕ ಜನಸಂಖ್ಯೆಯೆ ಏರಿಕೆ ಕಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಬಾಂಗ್ಲಾದೇಶದಲ್ಲಿ ಶೇ.18, ಪಾಕಿಸ್ತಾನದಲ್ಲಿ ಶೇ.3.75 ಹಾಗೂ ಬಾಂಗ್ಲಾದೇಶದಲ್ಲಿ ಶೇ. 10 ರಷ್ಟು ಏರಿಕೆಗೊಂಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News