ತಪ್ಪಿದ ಭಾರೀ ಅನಾಹುತ: ಏರ್‌ ಇಂಡಿಯಾ ವಿಮಾನ ಟೇಕ್‌ ಆಫ್‌ ಆಗುವ ವೇಳೆಯೇ ರನ್‌ವೇಯಲ್ಲಿ ಇಳಿದ ಇಂಡಿಗೋ ವಿಮಾನ

Update: 2024-06-09 07:22 GMT

Screengrab:X/@ShivAroor

ಮುಂಬೈ: ಏರ್ ಇಂಡಿಯಾ ಜೆಟ್ ಟೇಕ್ ಆಫ್ ಆಗುತ್ತಿದ್ದ ಮುಂಬೈ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಅದೇ ಸಮಯ ಇಂಡಿಗೋ ವಿಮಾನವು ಲ್ಯಾಂಡ್‌ ಆಗಿದ್ದು, ಕೆಲವೇ ಅಂತರದಲ್ಲಿ ನೂರಾರು ವಿಮಾನ ಪ್ರಯಾಣಿಕರು ಭಾರೀ ಅನಾಹುತದಿಂದ ಪಾರಾಗಿದ್ದಾರೆ.

ಘಟನೆ ಬಗ್ಗೆ ವಾಯುಯಾನ ನಿಯಮಿತ ನಾಗರಿಕ ವಿಮಾನಯಾನ ನಿರ್ದೇಶನಾಲಯವು ತನಿಖೆಯನ್ನು ಪ್ರಾರಂಭಿಸಿದ್ದು, ಘಟನೆ ವೇಳೆ ಕರ್ತವ್ಯದಲ್ಲಿರುವ ಏರ್ ಟ್ರಾಫಿಕ್ ಕಂಟ್ರೋಲ್ ಅಧಿಕಾರಿಯನ್ನು ಪದಚ್ಯುತಗೊಳಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಎರಡೂ ವಿಮಾನಗಳು ಒಂದೇ ರನ್‌ವೇಯಲ್ಲಿ ಕಾಣಿಸಿಕೊಂಡಿವೆ. ಏರ್ ಇಂಡಿಯಾ ಜೆಟ್ ಟೇಕಾಫ್ ಆಗುತ್ತಿದ್ದಂತೆ ಇಂಡಿಗೋ ವಿಮಾನ ಲ್ಯಾಂಡಿಂಗ್ ಆಗುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News