ಸುನೀತಾ ಕೇಜ್ರಿವಾಲ್ ಭೇಟಿ ಮಾಡಿದ ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೇನ್ ಅವರ ಪತ್ನಿ ಕಲ್ಪನಾ
ಹೊಸದಿಲ್ಲಿ: ಸೆರೆವಾಸದಲ್ಲಿರುವ ಜಾರ್ಖಂಡ್ ರಾಜ್ಯದ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಪತ್ನಿ ಕಲ್ಪನಾ ಸೊರೇನ್, ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ರನ್ನು ರಾಷ್ಟ್ರ ರಾಜಧಾನಿಯಲ್ಲಿರುವ ಅವರ ನಿವಾಸದಲ್ಲಿ ಶನಿವಾರ ಭೇಟಿ ಮಾಡಿದರು. ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲ(ಈಡಿ)ಯದಿಂದ ಬಂಧಿತರಾಗಿರುವ ಅರವಿಂದ್ ಕೇಜ್ರಿವಾಲ್ ಸದ್ಯ ಈಡಿ ಕಸ್ಟಡಿಯಲ್ಲಿದ್ದಾರೆ.
ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸಕ್ಕೆ ಆಗಮಿಸಿದ ಕಲ್ಪನಾ ಸೊರೇನ್, ಸುನೀತಾ ಕೇಜ್ರಿವಾಲ್ ಅವರಿಗೆ ತಮ್ಮ ಬೆಂಬಲ ಸೂಚಿಸಿದರು.
ಈ ಭೇಟಿಯ ಬೆನ್ನಿಗೇ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ದಿಲ್ಲಿ ಸಚಿವೆ ಅತಿಶಿ, “ಇಬ್ಬರು ಬಲಿಷ್ಠ ಮಹಿಳೆಯರನ್ನು ನೋಡಿ ಬಿಜೆಪಿಗೆ ದಿಗಿಲಾಗಬೇಕು” ಎಂದು ವ್ಯಂಗ್ಯವಾಡಿದ್ದಾರೆ.
“ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಸರಕಾರಗಳನ್ನು ಮುನ್ನಡೆಸುತ್ತಿದ್ದ ತಮ್ಮ ಪತಿಯರ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆಗಳು ಅಮಾನುಷ ಅಧಿಕಾರವನ್ನು ಬಳಿಸಿದರೂ ಹೆದರಿಕೊಳ್ಳದ ಇಬ್ಬರು ಬಲಿಷ್ಠ ಮಹಿಳೆಯರ ವೀಡಿಯೊ ನೋಡಿ ಬಿಜೆಪಿ ಹೆದರಿಕೊಳ್ಳಬೇಕು. ಸುನೀತಾ ಕೇಜ್ರಿವಾಲ್ ಹಾಗೂ ಕಲ್ಪನಾ ಸೊರೇನ್ ಅವರ ಸಾಮರ್ಥ್ಯ ಮತ್ತು ಧೈರ್ಯಕ್ಕೆ ನಾನು ಅವರಿಗೆ ವಂದಿಸುತ್ತೇನೆ” ಎಂದು ಅತಿಶಿ ಪೋಸ್ಟ್ ಮಾಡಿದ್ದಾರೆ.
ಜಾರಿ ನಿರ್ದೇಶನಾಲಯ(ಈಡಿ)ವು ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಮುಗಿ ಬಿದ್ದಿರುವ ಕುರಿತು ಕಲ್ಪನಾ ಸೊರೇನ್ ಅವರು ಸುನೀತಾ ಕೇಜ್ರಿವಾಲ್ ಅವರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ನಾನು ಸುನೀತಾ ಕೇಜ್ರಿವಾಲ್ ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬಲ್ಲೆ ಎಂದು ಕಲ್ಪನಾ ಸೊರೇನ್ ಹೇಳಿದರು.
BJP should be scared when they see this video of two strong women, who have not been intimidated by the brute power of central agencies used against their husbands, who were heading democratically elected governments.
— Atishi (@AtishiAAP) March 30, 2024
I salute @KejriwalSunita and Kalpana Soren for their… https://t.co/5QTi7PNXyP