ಸಂಸತ್ತಿನಲ್ಲಿ ರಚನಾತ್ಮಕ ಚರ್ಚೆಗಳನ್ನು ನಡೆಸಲು ಒಂದು ತಂಡದಂತೆ ಒಗ್ಗಟ್ಟಿನಿಂದ ಪಾಲ್ಗೊಳ್ಳಿ : ಸರ್ವಪಕ್ಷಗಳಿಗೆ ರಿಜಿಜು ಮನವಿ

Update: 2024-06-12 15:30 GMT

ಕಿರಣ್ ರಿಜಿಜು |  PC : PTI 

ಹೊಸದಿಲ್ಲಿ: ಮುಂಬರುವ ಲೋಕಸಭಾ ಅಧಿವೇಶನದಲ್ಲಿ ರಚನಾತ್ಮಕ ಚರ್ಚೆ ನಡೆಯಲು ಸರ್ವಪಕ್ಷಗಳೂ ಸಹಕರಿಸಬೇಕು ಎಂದು ಬುಧವಾರ ಮನವಿ ಮಾಡಿರುವ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ದೇಶವು ಸಂಸತ್ತಿನಲ್ಲಿ ಉತ್ತಮ ಗುಣಮಟ್ಟದ ಚರ್ಚೆಯನ್ನು ಎದುರು ನೋಡುತ್ತಿದೆ ಎಂದು ಹೇಳಿದ್ದಾರೆ.

18ನೇ ಲೋಕಸಭೆಯ ಮೊದಲ ಅಧಿವೇಶನವು ಜೂನ್ 24ರಿಂದ ಜುಲೈ 3ರವರೆಗೆ ನಡೆಯಲಿದೆ.

ಸಂಸದೀಯ ವ್ಯವಹಾರಗಳ ಸಚಿವರಾಗಿ ಮಂಗಳವಾರ ಅಧಿಕಾರ ಗ್ರಹಣ ಮಾಡಿದ ರಿಜಿಜು, ಜನರು ತೀರ್ಪು ನೀಡಿರುವುದರಿಂದ ಸಂಸತ್ತು ಸರ್ವಾನುಮತದಿಂದ ಕಾರ್ಯನಿರ್ವಹಿಸಬೇಕು ಹಾಗೂ ದೇಶಕ್ಕೆ ಸೇವೆ ಸಲ್ಲಿಸಲು ಎಲ್ಲರೂ ಒಂದಾಗಿ ಭಾರತೀಯ ತಂಡದಂತೆ ಕಾರ್ಯನಿರ್ವಹಿಸಬೇಕು ಎಂದು ಸರಕಾರ ಬಯಸುತ್ತದೆ ಎಂದು ಹೇಳಿದ್ದಾರೆ.

ಸಂಸತ್ತನ್ನು ನಡೆಸುವಲ್ಲಿ ಎಲ್ಲ ಪಕ್ಷಗಳ ಭಾಗವಹಿಸುವಿಕೆ ಹಾಗೂ ಸಹಕಾರವನ್ನು ಸರಕಾರ ಬಯಸುತ್ತಿದೆ ಎಂದೂ ರಿಜಿಜು ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News