ಪಕ್ಷದ ನೀತಿಯ ಬಗ್ಗೆ ಮಾತನಾಡಲು ಕಂಗನಾಗೆ ಅಧಿಕಾರ ನೀಡಿಲ್ಲ : ಬಿಜೆಪಿ

Update: 2024-08-26 14:27 GMT

ಕಂಗನಾ ರಣಾವತ್ | PC : PTI  

ಹೊಸದಿಲ್ಲಿ : ರೈತರ ಪ್ರತಿಭಟನೆ ಕುರಿತು ತನ್ನ ಸಂಸದೆ ಕಂಗನಾ ರಣಾವತ್ ಅವರು ನೀಡಿದ ವಿವಾದಾತ್ಮಕ ಹೇಳಿಕೆಯನ್ನು ತಾನು ಒಪ್ಪುವುದಿಲ್ಲವೆಂದು ಬಿಜೆಪಿ ಹೇಳಿದೆ. ಅಲ್ಲದೆ ಭವಿಷ್ಯದಲ್ಲಿ ಇಂತಹ ಹೇಳಿಕೆಗಳನ್ನು ನೀಡದಂತೆ ಅವರಿಗೆ ಎಚ್ಚರಿಕೆ ನೀಡಿದೆ.

“ರೈತ ಚಳವಳಿ ಕುರಿತು ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ನೀಡಿದ ಹೇಳಿಕೆಯು ಪಕ್ಷದ ಅಭಿಪ್ರಾಯವಲ್ಲ. ಕಂಗನಾ ರಣಾವತ್ ಅವರ ಹೇಳಿಕೆಗೆ ಬಿಜೆಪಿಯು ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸುತ್ತದೆ’’ ಎಂದು ಪಕ್ಷವು ಸೋಮವಾರ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಪಕ್ಷದ ನೀತಿಯಕುರಿತು ಹೇಳಿಕೆಗಳನ್ನು ನೀಡುವುದಕ್ಕೆ ಕಂಗನಾ ಅವರಿಗೆ ಅನುಮತಿಯನ್ನಾಗಲಿ ಅಥವಾ ಅಧಿಕಾರವನ್ನಾಗಲಿ ನೀಡಿಲ್ಲವೆಂದು ಅದು ಹೇಳಿದೆ.

ತನ್ನ ಅಭಿನಯದ ಎಮರ್ಜೆನ್ಸಿ ಚಿತ್ರದ ಪ್ರಚಾರಾರ್ಥ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಂದರ್ಭ ಕಂಗನಾ ಅವರು ರೈತರ ಪ್ರತಿಭಟನೆಯ ಹೆಸರಿನಲ್ಲಿ ಭಾರತದಲ್ಲಿ ಬಾಂಗ್ಲಾದೇಶದಲ್ಲಿ ನಡೆದಂತಹ ಅರಾಜಕತೆಯುಂಟಾಗುವ ಸಾಧ್ಯತೆಯಿತ್ತು ಎಂದು ಹೇಳಿದ್ದರು. ಬಾಹ್ಯಶಕ್ತಿಗಳು ದೇಶದೊಳಗಿನವರ ಸಹಾಯ ಪಡೆದು ನಮ್ಮನ್ನು ನಾಶಪಡಿಸಲು ಸಂಚುಹೂಡಿವೆ. ಒಂದು ವೇಳೆ ನಮ್ಮ ನಾಯಕತ್ವದ ದೂರದೃಷ್ಟಿ ಇಲ್ಲದೆ ಇರುತ್ತಿದ್ದಲ್ಲಿ ಅವರು ಯಶಸ್ವಿಯಾಗುತ್ತಿದ್ದರು ಎಂದಿದ್ದರು.

ತನ್ನ ಈ ಹೇಳಿಕೆಯ ವೀಡಿಯೊ ವನ್ನು ಆಕೆ ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News