ಕೀರ್ತಿ ಚಕ್ರ ಪುರಸ್ಕೃತ ದಿವಂಗತ ಯೋಧನ ಪತ್ನಿಯ ವಿರುದ್ಧ ಜಾಲತಾಣದಲ್ಲಿ ಅಶ್ಲೀಲ ಟೀಕೆ : ಎಫ್‌ಐಆರ್ ದಾಖಲು

Update: 2024-07-13 16:07 GMT

PC : PTI 

ಹೊಸದಿಲ್ಲಿ: ಕೀರ್ತಿ ಚಕ್ರ ಪುರಸ್ಕೃತ ದಿವಂಗತ ಯೋಧ ಅಂಶುಮಾನ್ ಸಿಂಗ್ ಅವರ ವಿಧವಾ ಪತ್ನಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಟೀಕೆಯನ್ನು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರ ಗುಪ್ತಚರ ಹಾಗೂ ವ್ಯೆಹಾತ್ಮಕ ಕಾರ್ಯಾಚರಣಾ ಘಟಕ (ಐಎಫ್‌ಎಸ್‌ಓ) ಎಫ್‌ಐಆರ್ ದಾಖಲಿಸಿದೆಯೆಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ರಾಷ್ಟೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು)ವು ಸೋಮವಾರ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಪರಿಗಣನೆಗೆ ತೆಗೆದುಗೊಂಡಿದ್ದು, ಈ ವಿಷಯವಾಗಿ ದಿಲ್ಲಿ ಪೊಲೀಸರಲ್ಲಿ ದೂರನ್ನು ದಾಖಲಿಸಿತ್ತು

ಭಾರತೀಯ ನ್ಯಾಯ ಸಂಹಿತಾ ಕಾಯ್ದೆ ಹಾಗೂ ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸೆಕ್ಷನ್‌ಗಳಡಿ ಐಎಫ್‌ಎಸ್‌ಓ ಘಟಕದಲ್ಲಿ ಎಫ್‌ಐಆರ್ ಅನ್ನು ದಾಖಲಿಸಲಾಗಿದೆ. ಅಶ್ಲೀಲ ಟೀಕೆಯನ್ನು ಪ್ರಸಾರ ಮಾಡಿದ ‘ ಹ್ಯಾಂಡಲ್ ಬಗ್ಗೆ ವಿವರಗಳನ್ನು ಒದಗಿಸುವಂತೆ ಎನ್‌ಸಿಡಬ್ಲ್ಯು, ಸಾಮಾಜಿಕ ಜಾಲತಾಣ ಎಕ್ಸ್ ಅ್ನ ಕೋರಿದೆ.

ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪತ್ನಿ ವಿರುದ್ಧ ಮಾಡಿದ ಅಶ್ಲೀಲ ಟೀಕೆಯು 2023ರ ಭಾರತೀಯ ನ್ಯಾಯಸಂಹಿತಾದ ಸೆಕ್ಷನ್ 79ರ ಉಲ್ಲಂಘನೆಯಾಗಿದೆ. ಮಹಿಳೆಯ ಗೌರವಕ್ಕೆ ಹಾನಿಯನ್ನು ಎಸಗುವಂತಹ ಕೃತ್ಯವನ್ನು ಈ ಕಾಯ್ದೆಯಡಿ ಅಪರಾಧವೆಂದು ಪರಿಗಣಿಸಲಾಗುತ್ತದೆ. ಇಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ವಿಷಯವನ್ನು ಪ್ರಸಾರ ಮಾಡುವುದನ್ನು 2000ರ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರಡಿ ಶಿಕ್ಷೆಯನ್ನು ವಿಧಿಸಲಾಗುತ್ತದೆ.

ವಿಷಯಕ್ಕೆ ಸಂಬಂಧಿಸಿ ಆಯೋಗವು ನ್ಯಾಯಸಮ್ಮತ ಹಾಗೂ ಸಕಾಲಿಕ ತನಿಖೆಯನ್ನು ನಡೆಸಬೇಕು ಮತ್ತು ಮೂರು ತಿಂಗಳುಗಳೊಳಗೆ ಕ್ರಮಾನುಷ್ಠಾನ (ಎಟಿಆರ್) ವರದಿಯನ್ನು ಸಲ್ಲಿಸುವಂತೆ ಅದು ಮನವಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News