ಮಿಝೋರಾಂ ನೂತನ ಮುಖ್ಯಮಂತ್ರಿಯಾಗಿ ಲಾಲ್ದುಹೋಮ ಪ್ರಮಾಣ ವಚನ ಸ್ವೀಕಾರ

Update: 2023-12-08 06:42 GMT

Photo: ANI

ಐಝೋಲ್: ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಝೋರಮ್ ಪೀಪಲ್ಸ್ ಮೂವ್ ಮೆಂಟ್ ನಾಯಕ ಲಾಲ್ದುಹೋಮ ಅವರಿಗೆ ರಾಜ್ಯಪಾಲ ಹರಿಬಾಬು ಕಂಭಂಪತಿ ಪ್ರತಿಜ್ಞಾ ವಿಧಿ ಬೋಧಿಸಿದರು. ಅವರೊಂದಿಗೆ ಝೋರಮ್ ಪೀಪಲ್ಸ್ ಮೂವ್ ಮೆಂಟ್ ಪಕ್ಷದ ಇತರ ಹನ್ನೊಂದು ಮಂದಿ ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ರಾಜಭವನದಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಮಿಝೋ ನ್ಯಾಷನಲ್ ಫ್ರಂಟ್ ನಾಯಕರು ಹಾಗೂ ಮುಖ್ಯಮಂತ್ರಿ ಹುದ್ದೆಯಿಂದ ನಿರ್ಗಮಿಸುತ್ತಿರುವ ಝೋರಾಂಥಂಗ ಉಪಸ್ಥಿತರಿದ್ದರು.

ಪ್ರಮಾಣ ವಚನ ಸಮಾರಂಭದಲ್ಲಿ ಎಲ್ಲ ಮಿಝೋ ನ್ಯಾಷನಲ್ ಫ್ರಂಟ್ ಶಾಸಕರು ಹಾಗೂ ಅದರ ಶಾಸಕಾಂಗ ಪಕ್ಷದ ನಾಯಕ ಲಾಲ್ ಛಂದಮ ರಾಲ್ಟೆ ಹಾಜರಿದ್ದರು. ಮಾಜಿ ಮುಖ್ಯಮಂತ್ರಿ ಲಾಲ್ ಥನ್ಹವ್ಲಾ ಕೂಡಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಮಂಗಳವಾರ ಝೋರೊ ಪೀಪಲ್ಸ್ ಮೂವ್ ಮೆಂಟ್ ಶಾಸಕಾಂಗ ಪಕ್ಷವು ಲಾಲ್ದುಹೋಮ ಅವರನ್ನು ತಮ್ಮ ನಾಯಕ ಹಾಗೂ ಕೆ.ಸಪ್ದಂಗ ಅವರನ್ನು ಉಪ ನಾಯಕನನ್ನಾಗಿ ಚುನಾಯಿಸಿತ್ತು.

40 ಸದಸ್ಯ ಬಲ ಹೊಂದಿರುವ ಮಿಝೋರಾಂ ವಿಧಾನಸಭೆಯು, ಮುಖ್ಯಮಂತ್ರಿ ಸೇರಿದಂತೆ 12 ಸಚಿವರನ್ನು ಹೊಂದಬಹುದಾಗಿದೆ. 2019ರಲ್ಲಿ ರಾಜಕೀಯ ಪಕ್ಷವಾಗಿ ನೋಂದಣಿಗೊಂಡಿದ್ದ ಝೋರೊ ಪೀಪಲ್ಸ್ ಮೂವ್ ಮೆಂಟ್ ಪಕ್ಷವು 27 ಸ್ಥಾನಗಳಲ್ಲಿ ಜಯಿಸುವ ಮೂಲಕ ಇತ್ತೀಚೆಗೆ ಮುಕ್ತಾಯಗೊಂಡ ಚುನಾವಣೆಯಲ್ಲಿ ಜಯಭೇರಿ ಬಾರಿಸಿತ್ತು. ಇದಕ್ಕೂ ಮುನ್ನ, 2018ರ ಚುನಾವಣೆಯ ಸಂದರ್ಭದಲ್ಲಿ ಅದರ ಸಂಖ್ಯಾಬಲ ಕೇವಲ 8 ಇತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News