ಎಲ್ಐಸಿಯ ನೂತನ ‘ಜೀವನ್ ಕಿರಣ್’ ಪಾಲಿಸಿ ಬಿಡುಗಡೆ
ಹೊಸದಿಲ್ಲಿ: ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ)ವು ಗುರುವಾರ ‘ಜೀವನ್ ಕಿರಣ್’ ಎಂಬ ನೂತನ ಪಾಲಿಸಿ ಯೋಜನೆಯೊಂದನ್ನು ಪರಿಚಯಿಸಿದೆ.
ಜೀವನ್ ಕಿರಣ್ ವೈಯಕ್ತಿಕ ಜೀವ ವಿಮಾ ಮತ್ತು ಉಳಿತಾಯ ಯೋಜನೆಯಾಗಿದೆ. ಪಾಲಿಸಿಯು ಜೀವ ವಿಮೆ ಒದಗಿಸುವುದರ ಜೊತೆಗೆ, ಮೆಚುರಿಟಿ ಸಮಯದಲ್ಲಿ ವಿಮಾದಾರ ಬದುಕಿದ್ದರೆ ಅವರು ಪಾವತಿಸಿರುವ ಪ್ರೀಮಿಯಮ್ಗಳನ್ನೂ ಹಿಂದಿರುಗಿಸುತ್ತದೆ.
ಭರಿಸಬಹುದಾದ ವೆಚ್ಚದಲ್ಲಿ ಗರಿಷ್ಠ ವಿಮಾ ಮೊತ್ತವನ್ನು ಪಡೆಯಲು ಈ ಪಾಲಿಸಿಯು ಅನುಕೂಲಕರವಾಗಿದೆ. 18 ವರ್ಷದಿಂದ 65 ವರ್ಷದವರೆಗಿನ ವ್ಯಕ್ತಿಗಳು ಈ ಯೋಜನೆಯ ಅಡಿಯಲ್ಲಿ ಪಾಲಿಸಿ ಖರೀದಿಸಲು ಅರ್ಹರಾಗಿರುತ್ತಾರೆ.
ಪಾಲಿಸಿಯನ್ನು ಎಲ್ಐಸಿಯ ವೆಬ್ಸೈಟ್ www.licindia.in
ನೂತನ ಪಾಲಿಸಿ ಯೋಜನೆ ಕುರಿತ ಕೆಲವು ಅಂಶಗಳು
*ಈ ಪಾಲಿಸಿಯ ಕನಿಷ್ಠ ವಿಮಾ ಮೊತ್ತ 15 ಲಕ್ಷ ರೂ.
*ವಿಮಾ ಅವಧಿ 10 ವರ್ಷದಿಂದ 40 ವರ್ಷಗಳು
*ಪ್ರೀಮಿಯಮ್ ದರಗಳು ಹೊಗೆಬತ್ತಿ ಸೇದುವವರು ಮತ್ತು ಸೇದದವರಿಗೆ ಭಿನ್ನವಾಗಿರುತ್ತವೆ.
*ಪ್ರೀಮಿಯಮ್ ಒಂದೇ ಬಾರಿ ಪಾವತಿಸಬಹುದು ಅಥವಾ ನಿರ್ದಿಷ್ಟ ಅವಧಿಯಲ್ಲಿ ನಿಯಮಿತವಾಗಿಯೂ ಪಾವತಿಸಬಹುದು.
*50 ಲಕ್ಷ ರೂ.ಗಿಂತ ಹೆಚ್ಚಿನ ವಿಮಾ ಮೊತ್ತಕ್ಕೆ ಪ್ರೀಮಿಯಮ್ ಪಾವತಿಯಲ್ಲಿ ರಿಯಾಯಿತಿಗಳು ಲಭ್ಯವಿವೆ.
*ಒಂದು ಕಂತಿನ ಕನಿಷ್ಠ ಪ್ರೀಮಿಯಮ್ ರೂ. 3,000 ಆಗಿರುತ್ತದೆ ಮತ್ತು ಏಕಕಂತಿನಲ್ಲಿ ಪಾವತಿಸುವ ಪ್ರೀಮಿಯಮ್ ಮೊತ್ತ ರೂ. 30,000 ಆಗಿರುತ್ತದೆ.