ವಿದ್ಯಾರ್ಥಿನಿಯನ್ನು ಹತ್ಯೆಗೈದು ಮೃತದೇಹದ ಚಿತ್ರವನ್ನು ವ್ಯಾಟ್ಸ್ ಆ್ಯಪ್ ಸ್ಟೇಟಸ್ ಹಾಕಿದ ಪ್ರಿಯಕರ!

Update: 2023-12-02 20:59 IST
ವಿದ್ಯಾರ್ಥಿನಿಯನ್ನು ಹತ್ಯೆಗೈದು ಮೃತದೇಹದ ಚಿತ್ರವನ್ನು ವ್ಯಾಟ್ಸ್ ಆ್ಯಪ್ ಸ್ಟೇಟಸ್ ಹಾಕಿದ ಪ್ರಿಯಕರ!

ಆಶಿಕ್ | Photo: indiatoday.in

  • whatsapp icon

ಚೆನ್ನೈ: ತಮಿಳುನಾಡಿನ ಕ್ರೋಮ್ಪೇಟ್ ನಲ್ಲಿರುವ ಖಾಸಗಿ ನರ್ಸಿಗ್ ಕಾಲೇಜೊಂದರಲ್ಲಿ ಕಲಿಯುತ್ತಿರುವ ಕೇರಳದ 20 ವರ್ಷದ ಯುವತಿಯೋರ್ವಳನ್ನು ಆಕೆಯ ಪ್ರಿಯಕರ ಶುಕ್ರವಾರ ಸಂಜೆ ಕತ್ತು ಹಿಸುಕಿ ಹತ್ಯೆಗೈದಿದ್ದಾನೆ. ಅನಂತರ ಆಕೆಯೆ ಮೃತದೇಹ ಚಿತ್ರ ತೆಗೆದಿದ್ದಾನೆ ಹಾಗೂ ಅದನ್ನು ವ್ಯಾಟ್ಸ್ ಆ್ಯಪ್ ಸ್ಟೇಟಸ್ ಆಗಿ ಹಾಕಿದ್ದಾನೆ.

ಮೃತಪಟ್ಟ ನರ್ಸಿಂಗ್ ವಿದ್ಯಾರ್ಥಿಯನ್ನು ಕೊಲ್ಲಂ ಜಿಲ್ಲೆಯ ಫೌಸಿಯಾ ಎಂದು ಗುರುತಿಸಲಾಗಿದೆ. ಈಕೆ ನ್ಯೂಕಾಲನಿಯಲ್ಲಿರುವ ಮಹಿಳೆಯರ ಹಾಸ್ಟೆಲ್ ನಲ್ಲಿ ವಾಸಿಸುತ್ತಿದ್ದಳು. ಆರೋಪಿ ಆಶಿಕ್ (20)ನೊಂದಿಗೆ ಈಕೆ ಕಳೆದ ಐದು ವರ್ಷಗಳಿಂದ ಸಂಬಂಧ ಹೊಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

‘‘ಫೌಸಿಯಾ ಹಾಗೂ ಆಶಿಕ್ ಶುಕ್ರವಾರ ಬೆಳಗ್ಗೆ ಕ್ರೋಮ್ಪೇಟ್ ನ ಹೊಟೇಲ್ ಒಂದರಲ್ಲಿ ಕೊಠಡಿಯನ್ನು ಬಾಡಿಗೆಗೆ ತೆಗೆದುಕೊಂಡಿದ್ದರು. ಅದೇ ದಿನ ಸಂಜೆ ಆಶಿಕ್ ತನ್ನ ವ್ಯಾಟ್ಸ್ ಆ್ಯಪ್ ಸ್ಟೇಟಸ್ ಆಗಿ ಫೌಸಿಯಾಳ ಮೃತದೇಹದ ಫೋಟೊ ಹಾಕಿದ್ದಾನೆ. ಫೌಸಿಯಾ ಅವರ ಗೆಳೆಯ ಅದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಪ್ರದೇಶದ ಸಿಸಿಟಿವಿ ದೃಶ್ಯಾವಳಿಯಲ್ಲಿ ಆಶಿಕ್ ಹೊಟೇಲ್ ನಿಂದ ಶುಕ್ರವಾರ ಸಂಜೆ ಪರಾರಿಯಾಗುತ್ತಿರುವುದು ಕಂಡು ಬಂದಿದೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News