ಮಹಾರಾಷ್ಟ್ರ| ಈ ವರ್ಷ 88 ಝೀಕಾ ವೈರಸ್ ಸೋಂಕಿನ ಪ್ರಕರಣಗಳು ವರದಿ

Update: 2024-08-08 17:08 GMT

PC : indiatoday.in

ಹೊಸದಿಲ್ಲಿ : ಮಹಾರಾಷ್ಟ್ರದಲ್ಲಿ ಈ ವರ್ಷ ಕನಿಷ್ಠ 88 ಝೀಕಾ ವೈರಸ್ ಸೋಂಕಿನ ಪ್ರಕರಣಗಳು ವರದಿಯಾಗಿವೆ ಎಂದು ರಾಜ್ಯ ಸಮಗ್ರ ರೋಗಗಳ ಸಮಗ್ರ ಕಣ್ಗಾವಲು ಯೋಜನೆಯ ಹಿರಿಯ ಆರೋಗ್ಯ ಅಧಿಕಾರಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಈ ಕಾರ್ಯಕ್ರಮವನ್ನು ಸಾರ್ವಜನಿಕ ಆರೋಗ್ಯ ಇಲಾಖೆ ನಡೆಸುತ್ತಿದೆ.

ಪುಣೆ ನಗರದಿಂದ ಒಟ್ಟು 73 ಝೀಕಾ ವೈರಸ್ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಪುಣೆ ಗ್ರಾಮೀಣದಿಂದ 6, ಪಿಂಪ್ರಿ-ಚಿಂಚ್ವಾಡದಿಂದ 2, ಅಹ್ಮದ್‌ ನಗರದಿಂದ 4, ಸಾಂಗ್ಲಿ, ಕೊಲ್ಹಾಪುರ ಹಾಗೂ ಸೋಲಾಪುರದಿಂದ ತಲಾ 1 ಸೋಂಕಿನ ಪ್ರಕರಣಗಳು ವರದಿಯಾಗಿವೆ ಎಂದು ವರದಿ ಹೇಳಿದೆ.

ಆಸ್ಪತ್ರೆಯಲ್ಲಿ ಬುಧವಾದ ದಾಖಲಾದ ಹೊಸ 8 ಮಂದಿ ಸೋಂಕಿತರಲ್ಲಿ ಪುಣೆ ನಗರದ 7 ಮಂದಿ ಹಾಗೂ ಪುಣೆ ಗ್ರಾಮೀಣದ ಒಬ್ಬರು ಸೇರಿದ್ದಾರೆ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News