ಮಹಾರಾಷ್ಟ್ರ | ಇವಿಎಂ ತಿರುಚಲಾಗಿದೆಯೆಂದು ಆರೋಪಿಸಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಬಹಿಷ್ಕರಿಸಿದ ವಿಪಕ್ಷದ ಶಾಸಕರು
Update: 2024-12-07 13:01 IST

ಆದಿತ್ಯ ಠಾಕ್ರೆ (Photo: ANI)
ಮುಂಬೈ: ಶಿವಸೇನೆಯಿಂದ ಆಯ್ಕೆಯಾದ ಶಾಸಕರು ಶನಿವಾರ ಪ್ರಮಾಣವಚನ ಸ್ವೀಕರಿಸದಿರಲು ನಿರ್ಧರಿಸಿದ್ದೇವೆ ಎಂದು ಉದ್ಧವ್ ನೇತೃತ್ವದ ಶಿವಸೇನೆಯ ನಾಯಕ ಆದಿತ್ಯ ಠಾಕ್ರೆ ಹೇಳಿದ್ದು, ವಿಧಾನಸಭೆಯ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಬಹಿಷ್ಕರಿಸಿದ್ದಾರೆ.
ಮಹಾ ವಿಕಾಸ್ ಅಘಾಡಿ(ಎಂವಿಎ)ಯಿಂದ ಆಯ್ಕೆಯಾದ ಎಲ್ಲಾ ಶಾಸಕರು ವಿಧಾನಸಭೆಯಲ್ಲಿನ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಬಹಿಷ್ಕರಿಸಲಿದ್ದಾರೆ ಎಂದು ಹೇಳಲಾಗಿದೆ.
ನಮ್ಮ ಶಿವಸೇನೆಯಿಂದ ಗೆದ್ದ ಶಾಸಕರು ಇಂದು ಪ್ರಮಾಣವಚನ ಸ್ವೀಕರಿಸುವುದಿಲ್ಲ ಎಂದು ನಾವು ನಿರ್ಧರಿಸಿದ್ದೇವೆ, ಇದು ಜನರ ಆದೇಶವಾಗಿದ್ದರೆ, ಜನರು ಸಂತೋಷಪಟ್ಟು ಸಂಭ್ರಮಿಸುತ್ತಿದ್ದರು, ಈ ಗೆಲುವನ್ನು ಜನರು ಸಂಭ್ರಮಿಸಿಲ್ಲ. ಆದ್ದರಿಂದ ಇವಿಎಂ ಬಗ್ಗೆ ನಮಗೆ ಅನುಮಾನವಿದೆ. ಪ್ರಜಾಪ್ರಭುತ್ವವನ್ನು ಕೊಲೆ ಮಾಡಲಾಗುತ್ತಿದೆ ಎಂದು ಆದಿತ್ಯ ಠಾಕ್ರೆ ಹೇಳಿದ್ದಾರೆ.