ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ ವಿರುದ್ಧ ಲೋಕಪಾಲ್ ಗೆ ಸಂಸದೆ ಮಹುವಾ ಮೊಯಿತ್ರಾ ದೂರು

Update: 2024-09-13 07:10 GMT

ಮಾಧಬಿ ಪುರಿ ಬುಚ್ / ಮಹುವಾ ಮೊಯಿತ್ರಾ (Photo: PTI)

ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಅಧ್ಯಕ್ಷೆ ಮಾಧಬಿ ಪುರಿ ಬುಚ್ ವಿರುದ್ಧ ಲೋಕಪಾಲ್ಗೆ ದೂರು ಸಲ್ಲಿಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಮಾಹಿತಿ ನೀಡಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಪುರಿ-ಬುಚ್ ವಿರುದ್ಧ ಲೋಕಪಾಲ್ ಗೆ ವಿದ್ಯುನ್ಮಾನವಾಗಿ ಮತ್ತು ಭೌತಿಕವಾಗಿ ದೂರನ್ನು ನೀಡಲಾಗಿದೆ. ಲೋಕಪಾಲ್ 30 ದಿನಗಳ ಒಳಗಾಗಿ ಅದನ್ನು ಪ್ರಾಥಮಿಕ ತನಿಖೆಗಾಗಿ ಸಿಬಿಐ ಅಥವಾ ಈಡಿಗೆ ವಹಿಸಬೇಕು. ನಂತರ ಎಫ್ ಐಆರ್ ದಾಖಲಿಸಿ ವಿಚಾರಣೆ ನಡೆಸಬೇಕು. ಪ್ರತಿಯೊಂದು ಘಟಕಕ್ಕೂ ಸಮನ್ಸ್ ನೀಡಬೇಕು, ಈ ಕುರಿತ ಎಲ್ಲಾ ಲಿಂಕ್ ನ್ನು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಸೆಬಿ ಮುಖ್ಯಸ್ಥೆ ಮಾಧವಿ ಬುಚ್ ಒಡೆತನದ ಖಾಸಗಿ ಸಲಹಾ ಘಟಕವು ಮಾಧಬಿ ಪುರಿ ಬುಚ್ ಸೆಬಿಯ ಪೂರ್ಣಾವಧಿ ಸದಸ್ಯೆಯಾದ ಸಮಯದಲ್ಲಿ ಸೆಬಿಯಿಂದ ನಿಯಂತ್ರಿಸಲ್ಪಟ್ಟ ಬಹು ಪಟ್ಟಿ ಮಾಡಿದ ಕಂಪನಿಗಳಿಂದ 99% ದಷ್ಟು ಪಾವತಿಗಳನ್ನು ಸ್ವೀಕರಿಸಿದ ಬಗ್ಗೆ ಆರೋಪಿಸಲಾಗಿತ್ತು.

ಮಾಧಬಿ ಪುರಿ ಬುಚ್ ಸೆಬಿಯ ಪೂರ್ಣಾವಧಿ ಸದಸ್ಯೆಯಾದ ಬಳಿಕ ತನ್ನ ಸಲಹಾ ಸಂಸ್ಥೆ ಅಗೋರಾ ಅಡ್ವೈಸರಿ ಪ್ರೈ.ಲಿ.ಮೂಲಕ ಮಹೀಂದ್ರ ಆ್ಯಂಡ್ ಮಹೀಂದ್ರ, ಐಸಿಐಸಿಐ ಬ್ಯಾಂಕ್, ಡಾ. ರೆಡ್ಡೀಸ್ ಮತ್ತು ಪಿಡಿಲೈಟ್ ಸೇರಿದಂತೆ 6 ಕಂಪನಿಗಳಿಂದ 2.95 ಕೋಟಿ ರೂ.ಗಳನ್ನು ಗಳಿಸಿದ್ದರು ಎಂದು ಕಾಂಗ್ರೆಸ್ ಆರೋಪಿಸಿತ್ತು.

ಈ ಬಗ್ಗೆ ಮಾಧವಿ ಪುರಿ ಬುಚ್ ಅವರು ಮೌನ ಕಾಯ್ದುಕೊಂಡಿರುವ ಬಗ್ಗೆ ಹಿಂಡನ್ ಬರ್ಗ್ ಪ್ರಶ್ನಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News