ಕೇಂದ್ರ ಸರ್ಕಾರ ದೇಶವನ್ನು ಕೇಸರೀಕರಣ ಮಾಡಲು ಹೊರಟಿದೆ: ಮಮತಾ ಬ್ಯಾನರ್ಜಿ ಟೀಕೆ

Update: 2023-11-18 06:05 GMT

ಮಮತಾ ಬ್ಯಾನರ್ಜಿ (PTI)

ಕೊಲ್ಕತ್ತಾ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಕೇಂದ್ರ ಸರ್ಕಾರವು ಹಲವು ಸಂಸ್ಥೆಗಳನ್ನು ಕೇಸರೀಕರಣಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ. ಭಾರತೀಯ ಕ್ರಿಕೆಟ್‌ ತಂಡದ ಅಭ್ಯಾಸದ ವೇಳೆ ತೊಡುವ ಕೇಸರಿ ಜೆರ್ಸಿಯನ್ನು ಅವರು ವಿರೋಧಿಸಿದ್ದಾರೆ.

ಪೊಸ್ತಾ ಬಝಾರ್‌ನಲ್ಲಿ ಜಗಧಾತ್ರಿ ಪೂಜಾದ ಉದ್ಘಾಟನೆ ವೇಳೆ ಮಾತನಾಡಿದ ಅವರು, ಟೀಂ ಇಂಡಿಯಾದ ಅಭ್ಯಾಸ ಜೆರ್ಸಿಗಳಲ್ಲಿ ಮಾತ್ರವಲ್ಲದೆ, ಮೆಟ್ರೋ ಸ್ಟೇಷನ್‌ಗಳಿಗೂ ಕೇಂದ್ರ ಸರ್ಕಾರ ಕೇಸರಿ ಬಣ್ಣ ಹೊಡೆಸುತ್ತಿದೆ ಎಂದಿದ್ದಾರೆ.

ಅವರು ಇಡೀ ದೇಶಕ್ಕೆ ಕೇಸರಿ ಬಣ್ಣ ಬಳಿಯಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ಭಾರತೀಯ ಆಟಗಾರರ ಮೇಲೆ ನಾವು ಅಭಿಮಾನ ಹೊಂದಿದ್ದೇವೆ, ಅವರು ವಿಶ್ವಕಪ್‌ ಗೆಲ್ಲುತ್ತಾರೆಂದು ನಂಬುತ್ತೇನೆ, ಆದರೆ, ನಮ್ಮ ಆಟಗಾರರು ಈಗ ಕೇಸರಿ ಬಣ್ಣದ ಜೆರ್ಸಿ ಹಾಕಿ ಆಡಬೇಕಿದೆ, ಮೆಟ್ರೋ ಸ್ಟೇಷನ್‌ಗಳಿಗೂ ಕೇಸರಿ ಬಳಿಯಲಾಗಿದೆ, ಇದನ್ನು ಒಪ್ಪಲಾಗದು ಎಂದು ಬ್ಯಾನರ್ಜಿ ಹೇಳಿದ್ದಾರೆ.

ದೇಶವು ಇಲ್ಲಿನ ಜನರಿಗೆ ಸೇರಿದ್ದೇ ವಿನಃ, ಬಿಜೆಪಿಯ ಜನರಿಗೆ ಸೇರಿದ್ದಲ್ಲ. ಅಧಿಕಾರ ಬರುತ್ತದೆ ಹೋಗುತ್ತದೆ, ಆದರೆ, ಇಂತಹದ್ದೆಲ್ಲಾ ಯಾವ ಕಾರಣಕ್ಕೂ ಫಲ ನೀಡುವುದಿಲ್ಲ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News