ಮಣಿಪುರ: ಗುಂಪುಗಳ ನಡುವೆ ಕಾಳಗ; ಮಹಿಳೆ ಸಾವು

Update: 2024-09-10 14:59 GMT

ಸಾಂದರ್ಭಿಕ ಚಿತ್ರ | PC : PTI 

ಇಂಫಾಲ: ಮಣಿಪುರದ ಕಿಂಗ್‌ಪೊಕ್ಪಿ ಜಿಲ್ಲೆಯಲ್ಲಿ ಎರಡು ಶಸ್ತ್ರಧಾರಿ ಗುಂಪುಗಳ ನಡುವಿನ ಕಾಳಗದ ನಡುವೆ ಸಿಲುಕಿಕೊಂಡ 46 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದರು. ಘಟನೆಯು ರವಿವಾರ ರಾತ್ರಿ ತಂಗ್ಬುಹ್ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಕೆಲವು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಇದರಿಂದ ಬೆದರಿದ ಸ್ಥಳೀಯರು ಸಮೀಪದ ಕಾಡುಗಳಿಗೆ ಪಲಾಯನಗೈದರು ಎಂದು ಪೊಲೀಸರು ತಿಳಿಸಿದರು.

ಮೃತ ಮಹಿಳೆಯನ್ನು ನೆಮ್ಜಾಖೋಲ್ ಲುಂಗಿಡಿಮ್ ಎಂದು ಗುರುತಿಸಲಾಗಿದೆ. ಚುರಚಾಂದ್‌ಪುರ್ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

ಎರಡು ಗುಂಪುಗಳ ನಡುವೆ ನಡೆದ ಸಂಘರ್ಷದ ವೇಳೆ ಹಲವಾರು ಶಕ್ತಿಶಾಲಿ ಬಾಂಬ್‌ಗಳನ್ನು ಸಿಡಿಸಲಾಗಿದೆ. ಬಳಿಕ, ಅದೇ ರಾತ್ರಿ ಸಮೀಪದ ಶಾಲೆಯೊಂದರಲ್ಲಿ ನಿಯೋಜಿಸಲಾಗಿರುವ ಸಿಆರ್‌ಪಿಎಫ್ ಯೋಧರು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಆ ಗುಂಡಿನ ಚಕಮಕಿಯಲ್ಲಿ ಯಾರೂ ಗಾಯಗೊಂಡಿಲ್ಲ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News