ಬಿಎಸ್‌ಪಿ ಅಧ್ಯಕ್ಷೆಯಾಗಿ ಮಾಯಾವತಿ ಪುನರಾಯ್ಕೆ

Update: 2024-08-27 15:46 GMT

ಮಾಯಾವತಿ | PC : PTI 

ಲಕ್ನೋ : ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)ದ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಯಾವತಿ ಅವರು ಮಂಗಳವಾರ ಸರ್ವಾನುಮತದಿಂದ ಪುನರಾಯ್ಕೆಯಾಗಿದ್ದಾರೆ.

ಬಿಎಸ್‌ಪಿ ಕೇಂದ್ರ ಕಾರ್ಯಕಾರಿ ಸಮಿತಿಯ ವಿಶೇಷ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು,ರಾಷ್ಟ್ರೀಯ ಮಟ್ಟದ ಮತ್ತು ರಾಜ್ಯ ಪಕ್ಷ ಘಟಕಗಳ ಹಿರಿಯ ಪದಾಧಿಕಾರಿಗಳು ಹಾಗೂ ದೇಶಾದ್ಯಂತದಿಂದ ಪ್ರತಿನಿಧಿಗಳು ಭಾಗವಹಿಸಿದ್ದರು ಎಂದು ಪಕ್ಷವು ತಿಳಿಸಿದೆ.

ಮಾಯಾವತಿ (68) ನಾಲ್ಕು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಎರಡು ದಶಕಗಳಿಗೂ ಹಿಂದೆ ಬಿಎಸ್‌ಪಿಯ ಸ್ಥಾಪಕ ಕಾನ್ಶಿರಾಂ ಅವರು ಮಾಯಾವತಿಯವರನ್ನು ತನ್ನ ರಾಜಕೀಯ ಉತ್ತರಾಧಿಕಾರಿಯನ್ನಾಗಿ ಘೋಷಿಸಿದ್ದರು.

ಬಹು ಜನ ಸಮಾಜ ಆಂದೋಲನದ ಮೂಲಕ ದಲಿತರು, ಆದಿವಾಸಿಗಳು ಮತ್ತು ಒಬಿಸಿಗಳ ಏಳಿಗೆಗಾಗಿ ಯಾವುದೇ ತ್ಯಾಗಕ್ಕೆ ತಾನು ಸಿದ್ಧವಿರುವುದಾಗಿ ಮಾಯಾವತಿ ಪಕ್ಷದ ಬೆಂಬಲಿಗರಿಗೆ ಭರವಸೆಯನ್ನು ನೀಡಿದರು ಎಂದೂ ಹೇಳಿಕೆಯು ತಿಳಿಸಿದೆ.

ತಾನು ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗುವ ಪ್ರಶ್ನೆಯೇ ಇಲ್ಲ ಎಂದು ಮಾಯಾವತಿ ಎರಡು ದಿನಗಳ ಹಿಂದೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News