ದಿಲ್ಲಿಯಲ್ಲಿ 2.6 ತೀವ್ರತೆಯ ಲಘು ಭೂಕಂಪನ
Update: 2023-11-11 11:03 GMT
ಹೊಸದಿಲ್ಲಿ: ಶನಿವಾರ ದಿಲ್ಲಿಯಲ್ಲಿ 2.6 ತೀವ್ರತೆಯ ಲಘು ಭೂಕಂಪನ ಸಂಭವಿಸಿದೆ. ಈ ಭೂಕಂಪನವು ಮಧ್ಯಾಹ್ನ 3.36 ಗಂಟೆಗೆ ಸಂಭವಿಸಿದೆ ಎಂದು indiatoday.in ವರದಿ ಮಾಡಿದೆ.
ಉತ್ತರ ದಿಲ್ಲಿಯಲ್ಲಿ ಸಂಭವಿಸಿದ ಭೂಕಂಪನದ ಕೇಂದ್ರವು ನೆಲದಿಂದ 10 ಕಿಮೀ ಆಳದಲ್ಲಿತ್ತು ಎಂದು ರಾಷ್ಟ್ರೀಯ ಭೂಕಂಪನ ಕೇಂದ್ರ ತಿಳಿಸಿದೆ.
ಈ ಸಂದರ್ಭದಲ್ಲಿ ಯಾವುದೇ ಆಸ್ತಿಪಾಸ್ತಿ ಹಾನಿ ಅಥವಾ ಜೀವಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.
ನೇಪಾಳದಲ್ಲಿ 5.6 ತೀವ್ರತೆಯ ಭೂಕಂಪ ಸಂಭವಿಸಿದ ನಂತರ ಕೆಲ ದಿನಗಳ ಹಿಂದಷ್ಟೆ ರಾಷ್ಟ್ರ ರಾಜಧಾನಿ ಪ್ರಾಂತ್ಯವಾದ ದಿಲ್ಲಿ ಹಾಗೂ ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಭೂಕಂಪನದ ಅನುಭವವಾಗಿತ್ತು.