ಮುಹಮ್ಮದ್ ಸಿರಾಜ್‌ರನ್ನು ಕೈಬಿಟ್ಟಿದ್ದೇಕೆ? : ನಾಯಕ ರೋಹಿತ್ ಶರ್ಮ ವಿವರಣೆ

Update: 2025-01-18 20:42 IST
Muhammad Siraj, Rohit Sharma

ಮುಹಮ್ಮದ್ ಸಿರಾಜ್‌,  ರೋಹಿತ್ ಶರ್ಮ |  PTI 

  • whatsapp icon

ಮುಂಬೈ: ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಶನಿವಾರ ಪ್ರಕಟವಾಗಿರುವ ಭಾರತ ಕ್ರಿಕೆಟ್ ತಂಡದಿಂದ ವೇಗದ ಬೌಲರ್ ಮುಹಮ್ಮದ್ ಸಿರಾಜ್‌ರನ್ನು ಕೈಬಿಟ್ಟಿರುವ ನಿರ್ಧಾರ ಅಚ್ಚರಿಗೆ ಕಾರಣವಾಗಿದೆ.

ಸಿರಾಜ್‌ರನ್ನು ಕೈಬಿಟ್ಟಿರುವ ನಿರ್ಧಾರದ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿರುವ ನಾಯಕ ರೋಹಿತ್ ಶರ್ಮಾ, ನಾವು ಕೇವಲ ಮೂವರು ವೇಗಿಗಳನ್ನು ಬಯಸಿದ್ದೆವು. ದುರದೃಷ್ಟವಶಾತ್ ಸಿರಾಜ್ ಅವರು ತಂಡದಿಂದ ಹೊರಗುಳಿದಿದ್ದಾರೆ. ಹೊಸ ಚೆಂಡಿನಲ್ಲಿ ಬೌಲಿಂಗ್ ಮಾಡಬಲ್ಲ ಹಾಗೂ ಮಧ್ಯಮ ಓವರ್‌ನಲ್ಲಿ ಪ್ರಭಾವಬೀರಬಲ್ಲ ಬೌಲರ್‌ಗಳಿಗೆ ನಾವು ಆದ್ಯತೆ ನೀಡಿದ್ದೇವೆ. ಜಸ್‌ಪ್ರಿತ್ ಬುಮ್ರಾ, ಮುಹಮ್ಮದ್ ಶಮಿ ಹಾಗೂ ಅರ್ಷದೀಪ್ ಸಿಂಗ್ ಒಳಗೊಂಡ ವೇಗದ ಬೌಲಿಂಗ್ ವಿಭಾಗ ನಮ್ಮ ಪ್ರಕಾರ ಸಮತೋಲಿತವಾಗಿದೆ ಎಂದರು.

ಬುಮ್ರಾ ಲಭ್ಯತೆಯ ಕುರಿತು ಇನ್ನೂ ಸ್ಪಷ್ಟತೆ ಇಲ್ಲದಿರುವಾಗ ನಮಗೆ ಎಲ್ಲ ಹಂತಗಳಲ್ಲೂ ಪ್ರದರ್ಶನ ನೀಡಬಲ್ಲ ಬೌಲರ್‌ಗಳ ಅಗತ್ಯವಿದೆ. ಸಿರಾಜ್ ಅವರು ಹೊಸ ಚೆಂಡಿನೊಂದಿಗೆ ಹೆಚ್ಚು ಅವಲಂಬಿತರಾಗಿದ್ದಾರೆ. ಇದು ಆಯ್ಕೆಗಳನ್ನು ಸೀಮಿತಗೊಳಿಸುತ್ತದೆ ಎಂದು ರೋಹಿತ್ ಹೇಳಿದ್ದಾರೆ.

ಸ್ಥಿರ ಪ್ರದರ್ಶನ ನೀಡುತ್ತಿರುವ ಸಿರಾಜ್ ಅವರೊಂದಿಗೆ ಸಂಜು ಸ್ಯಾಮ್ಸನ್‌ರನ್ನು ಕೈಬಿಟ್ಟಿರುವುದು ಅಭಿಮಾನಿಗಳು ಹಾಗೂ ವಿಮರ್ಶಕರ ಅಚ್ಚರಿಗೆ ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News