ಮತದಾನೋತ್ತರ ಸಮೀಕ್ಷೆ ನಡೆಸುವ ಹೆಚ್ಚಿನ ಏಜನ್ಸಿಗಳು ಬಿಜೆಪಿ ಪರ ಕೆಲಸ ಮಾಡುತ್ತಿದ್ದವುಗಳು: ಅಖಿಲೇಶ್‌ ಯಾದವ್‌

Update: 2024-06-03 11:13 GMT

ಅಖಿಲೇಶ್‌ ಯಾದವ್‌ | PC: PTI 

ಲಕ್ನೋ: ಮತದಾನೋತ್ತರ ಸಮೀಕ್ಷೆಗಳ ವಿಶ್ವಾಸಾರ್ಹತೆಯನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಪ್ರಶ್ನಿಸಿದ್ದಾರೆ. ಈ ಮತದಾನೋತ್ತರ ಸಮೀಕ್ಷೆಗಳನ್ನು ನಡೆಸುವ ಏಜನ್ಸಿಗಳು ವಾತಾವರಣವು ಬಿಜೆಪಿ ಪರ ಇದೆ ಎಂದು ಬಿಂಬಿಸಲು ಯತ್ನಿಸುತ್ತಿವೆ ಎಂದು ಅವರು ಹೇಳಿದರು.

ಇಂಡಿಯಾ ಮೈತ್ರಿಕೂಟದ ವಿಜಯವು ದೇಶ ಮತ್ತು ಅದರ ಜನತೆಯ ವಿಜಯವಾಗಲಿದೆ ಎಂದು ಅವರು ಹೇಳಿದರು.

“ನಾವು ಮತ್ತು ನೀವು (ಮಾಧ್ಯಮ) ಪ್ರಜಾಪ್ರಭುತ್ವವನ್ನು ಬಲಪಡಿಸಬೇಕಿದೆ. ಅವರ ರ್ಯಾಲಿಗಳಲ್ಲಿ ಜನರಿರಲಿಲ್ಲ ಎಂದು ಗೊತ್ತು, ಅವರ ಟೆಂಟ್‌ಗಳು ಖಾಲಿಯಾಗಿದ್ದವು, ಯಾವುದೂ ಅವರ ಪರ ಇರಲಿಲ್ಲ,” ಎಂದು ಅಖಿಲೇಶ್‌ ಹೇಳಿದರು.

ಎಕ್ಸಿಟ್‌ ಪೋಲ್‌ಗಳನ್ನು ಪ್ರಶ್ನಿಸಿದ ಅವರು ಎಕ್ಸಿಟ್‌ ಪೋಲ್‌ ನಡೆಸುವ ಹೆಚ್ಚಿನ ಏಜನ್ಸಿಗಳು ಬಿಜೆಪಿಗೆ ಬೂತ್‌ ನಿರ್ವಹಣೆ ಕೆಲಸ ಮಾಡುತ್ತಿದ್ದವುಗಳಾಗಿದ್ದವು ಎಂದು ಅವರು ಹೇಳಿಕೊಂಡರು.

“ಎಕ್ಸಿಟ್‌ ಪೋಲ್‌ಗಳು ಬಿಜೆಪಿಗೆ ಪೂರಕ ವಾತಾವರಣ ಸೃಷ್ಟಿಸುತ್ತಿವೆ. ಚುನಾವಣೆಗಳು ಮುಗಿದಿವೆ. ಎಕ್ಸಿಟ್‌ ಪೋಲ್‌ಗಳು ಹಲವು ವಿಷಯ ತೋರಿಸುತ್ತಿವೆ. ಇದಕ್ಕೆ ಬಿಜೆಪಿ ಕಾರಣ. ಅವರು ಶಾಂತಿ ಸೌಹಾರ್ದತೆ ಕದಡಿದ್ದಾರೆ, ಮೀಸಲಾತಿ ಅಂತ್ಯಗೊಳಿಸಲು ಸಂಚು ಹೂಡಿದ್ದಾರೆ. ಅವರಿಂದ ಮಹಿಳೆಯರ ವಿರುದ್ಧದ ಅಪರಾಧಗಳು ಹೆಚ್ಚಾಗಿವೆ. ಹಣದುಬ್ಬರ, ನಿರುದ್ಯೋಗ ಏರಿಕೆಯಾಗಿದೆ, ಬಡವರು ಇನ್ನಷ್ಟು ಬಡವರಾಗಿದ್ದಾರೆ.” ಎಂದು ಅಖಿಲೇಶ್‌ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News