400 ಕೋಟಿ ರೂ. ನೀಡಲು ಬೇಡಿಕೆ ಇಟ್ಟು ಮುಕೇಶ್ ಅಂಬಾನಿಗೆ ಮೂರನೆಯ ಬಾರಿ ಜೀವ ಬೆದರಿಕೆ!

Update: 2023-10-31 06:01 GMT

ಮುಕೇಶ್ ಅಂಬಾನಿ (PTI)

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರಿಗೆ ಅಪರಿಚಿತ ವ್ಯಕ್ತಿಗಳಿಂದ ಮೂರನೇಯ ಬಾರಿ ಜೀವ ಬೆದರಿಕೆ ಬಂದಿದ್ದು, ರೂ. 400 ಕೋಟಿ ನೀಡಲು ಬೇಡಿಕೆ ಇಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ಅಂಬಾನಿಯವರ ಕಂಪನಿಗೆ ಬೆದರಿಕೆ ಇಮೇಲ್ ಬಂದಿದೆ.

ನಾಲ್ಕು ದಿನಗಳ ಅಂತರದಲ್ಲಿ ಅಂಬಾನಿಗೆ ಕಳಿಸಿರುವ ಮೂರನೆಯ ಬೆದರಿಕೆ ಇಮೇಲ್ ಇದಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದಕ್ಕೂ ಮುನ್ನ, ಶುಕ್ರವಾರ ಅಪರಿಚಿತ ವ್ಯಕ್ತಿಯೊಬ್ಬ ರವಾನಿಸಿದ್ದ ಜೀವ ಬೆದರಿಕೆ ಇಮೇಲ್ ಕುರಿತು ಉದ್ಯಮಿ ಅಂಬಾನಿಯವರ ಭದ್ರತಾ ಮುಖ್ಯಸ್ಥರು ದಾಖಲಿಸಿದ್ದ ದೂರನ್ನು ಆಧರಿಸಿ ಗಾಮ್ದೇವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಶನಿವಾರ, ಅಂಬಾನಿ ಕಂಪನಿಗೆ ರೂ. 200 ಕೋಟಿ ಬೇಡಿಕೆ ಇಟ್ಟು, ಎರಡನೆಯ ಜೀವ ಬೆದರಿಕೆ ಇಮೇಲ್ ರವಾನೆಯಾಗಿತ್ತು. ಸೋಮವಾರ ಕಂಪನಿಯು ಮೂರನೆಯ ಇಮೇಲ್ ಸ್ವೀಕರಿಸಿದೆ.

ಮುಂಬೈ ಪೊಲೀಸರು, ಅವರ ಅಪರಾಧ ತನಿಖಾ ವಿಭಾಗ ಹಾಗೂ ಸೈಬರ್ ತಂಡಗಳು ಇಮೇಲ್ ರವಾನಿಸಿರುವ ವ್ಯಕ್ತಿಯನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News