ಭಾರತದ ಭೂಪ್ರದೇಶಗಳನ್ನೊಳಗೊಂಡ ಹೊಸ ನಕ್ಷೆಯನ್ನು ರೂ 100ರ ಹೊಸ ನೋಟುಗಳಲ್ಲಿ ಮುದ್ರಿಸಲಿರುವ ನೇಪಾಳ

Update: 2024-05-04 07:40 GMT
Photo: PTI

ಕಾಠ್ಮಂಡು: ನೇಪಾಳ ದೇಶದ ನಕ್ಷೆಯೊಂದಿಗೆ ಹೊಸ ರೂ 100ರ ಕರೆನ್ಸಿ ನೋಟುಗಳ ಮುದ್ರಣದ ಕುರಿತು ಶುಕ್ರವಾರ ಹೇಳಿಕೆ ನೀಡಿದೆ. ಈ ನೋಟುಗಳಲ್ಲಿ ಭಾರತ ತನ್ನ ಭೂಭಾಗ ಎಂದು ಹೇಳುವ ವಿವಾದಿತ ಪ್ರದೇಶಗಳಾದ ಲಿಪುಲೇಖ್‌, ಲಿಂಪಿಯದುರ ಮತ್ತು ಕಾಲಾಪಾನಿ ಪ್ರದೇಶಗಳನ್ನು ನೇಪಾಳ ತನ್ನ ನಕ್ಷೆಯಲ್ಲಿ ಪ್ರದರ್ಶಿಸಿದೆ.

ನೇಪಾಳ ಸಚಿವ ಸಂಪುಟ ನಿರ್ಧಾರದ ಬಗ್ಗೆ ಮಾಹಿತಿ ನೀಡಿದ ಸರ್ಕಾರದ ವಕ್ತಾರೆ ರೇಖಾ ಶರ್ಮ, ರೂ 100 ಮುಖಬೆಲೆಯ ನೋಟುಗಳಲ್ಲಿ ಲಿಪುಲೆಖ್‌, ಲಿಂಪಿಯಧುರ ಮತ್ತು ಕಾಲಾಪಾನಿ ಪ್ರದೇಶಗಳನ್ನೊಳಗೊಂಡ ನೇಪಾಳದ ಹೊಸ ನಕ್ಷೆಯೊಂದಿಗೆ ಮುದ್ರಿಸುವ ನಿರ್ಧಾರವನ್ನು ಪ್ರಧಾನಿ ಪುಷ್ಪಕಮಲ್‌ ದಹಲ್‌ ʼಪ್ರಚಂಡʼ ಅವರ ಸಚಿವ ಸಂಪುಟ ತೀರ್ಮಾನಿಸಿದೆ,” ಎಂದು ಹೇಳಿದ್ದಾರೆ.

ರೂ 100 ಮುಖಬೆಲೆಯ ಹಳೆಯ ನೋಟುಗಳಲ್ಲಿದ್ದ ಹಳೆಯ ನಕ್ಷೆಯ ಬದಲಿಗೆ ಹೊಸ ನಕ್ಷೆಯಕನ್ನು ಮುದ್ರಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ನೇಪಾಳ ತನ್ನ ಸಂವಿಧಾನಕ್ಕೆ ತಿದ್ದುಪಡಿ ತಂದು ಈ ಮೂರು ಪ್ರಮುಖ ಪ್ರದೇಶಗಳನ್ನು ದೇಶದ ರಾಜಕೀಯ ನಕ್ಷೆಯಲ್ಲಿ ಸೇರಿಸುವ ಪ್ರಕ್ರಿಯೆಯನ್ನು ಜೂನ್‌ 18, 2020ರಂದು ಪೂರ್ಣಗೊಳಿಸಿತ್ತು.

ನೇಪಾಳದ ಕ್ರಮವನ್ನು ಏಕಪಕ್ಷೀಯ ನಿರ್ಧಾರ ಎಂದು ಭಾರತ ಟೀಕಿಸಿತ್ತಲ್ಲದೆ ಈ ಮೂರು ಭೂಪ್ರದೇಶಗಳನ್ನು ಅದರ ನಕ್ಷೆಯಲ್ಲಿ ಸೇರಿಸಿರುವುದು ಅಸ್ವೀಕಾರಾರ್ಹ ಎಂದು ಹೇಳಿತ್ತು.

ಈ ಮೂರೂ ಪ್ರದೇಶಗಳು ತನ್ನ ಭೂಭಾಗ ಎಂದು ಭಾರತ ಹೇಳುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News