‘ಎಲ್ಐಸಿಯ ಅಮೃತಬಾಲ್’ ಬಿಡುಗಡೆ

Update: 2024-02-16 17:57 GMT

ಹೊಸದಿಲ್ಲಿ: ಭಾರತೀಯ ಜೀವ ವಿಮಾ ನಿಗಮವು ‘ಎಲ್ಐಸಿಯ ಅಮೃತಬಾಲ್’ ಎಂಬ ನೂತನ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

ಭಾರತ ಸರಕಾರದ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ವಿವೇಕ್ ಜೋಶಿ ನೂತನ ಉತ್ಪನ್ನವನ್ನು ಬಿಡುಗಡೆಗೊಳಿಸಿದರು. ಉತ್ಪನ್ನವು ಫೆಬ್ರವರಿ 17ರಿಂದ ಮಾರಾಟಕ್ಕೆ ಲಭ್ಯವಿದೆ.

‘ಎಲ್ಐಸಿಯ ಅಮೃತಬಾಲ್’ ವೈಯಕ್ತಿ, ಉಳಿತಾಯ, ಜೀವ ವಿಮಾ ಯೋಜನೆಯಾಗಿದೆ. ಮುಖ್ಯವಾಗಿ ಮಗುವಿನ ಉನ್ನತ ಶಿಕ್ಷಣ ಮತ್ತು ಇತರ ಅಗತ್ಯಗಳಿಗೆ ನಿಧಿಯನ್ನು ಪೂರೈಸುವುದಕ್ಕಾಗಿ ಈ ಉತ್ಪನ್ನವನ್ನು ರೂಪಿಸಲಾಗಿದೆ.

ಮುಖ್ಯಾಂಶಗಳು

* ಪಾಲಿಸಿ ಪಡೆಯಲು ಕನಿಷ್ಠ ವಯಸ್ಸು 30 ದಿನಗಳು ಮತ್ತು ಗರಿಷ್ಠ ವಯಸ್ಸು 13ವರ್ಷ.

* ಪಾಲಿಸಿ ಪಕ್ವ (ಮೆಚುರಿಟಿ)ಗೊಳ್ಳುವ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 25 ವರ್ಷ.

* 5, 6 ಅಥವಾ 7 ವರ್ಷಗಳ ಕಿರು ಪ್ರೀಮಿಯಮ್ ಪಾವತಿ ಅವಧಿ ಲಭ್ಯವಿದೆ.

* ಸೀಮಿತ ಪ್ರೀಮಿಯಮ್ ಪಾವತಿಗೆ ಸಂಬಂಧಿಸಿ ಪಾಲಿಸಿಯ ಕನಿಷ್ಠ ಅವಧಿ 10 ವರ್ಷ ಮತ್ತು ಏಕ ಪ್ರೀಮಿಯಮ್ ಪಾವತಿಗೆ ಸಂಬಂಧಿಸಿ ಪಾಲಿಸಿಯ ಕನಿಷ್ಠ ಅವಧಿ 5 ವರ್ಷ.

* ಸೀಮಿತ/ಏಕ ಪ್ರೀಮಿಯಮ್ ಪಾವತಿಗೆ ಸಂಬಂಧಿಸಿ ಪಾಲಿಸಿಯ ಗರಿಷ್ಠ ಅವಧಿ 25 ವರ್ಷ ಮತ್ತು ಪಿಒಎಸ್ಪಿ-ಎಲ್ಐ/ಸಿಪಿಎಸ್ಸಿ-ಎಸ್ಪಿವಿ ಮೂಲಕ ಪಡೆಯಲಾದ ಪಾಲಿಸಿಗಳ ಗರಿಷ್ಠ ಅವಧಿ 20 ವರ್ಷ

* ಪಾಲಿಸಿಯ ಕನಿಷ್ಠ ಮೊತ್ತ ರೂ. 2 ಲಕ್ಷ ರೂ. ಗರಿಷ್ಠ ಮೊತ್ತಕ್ಕೆ ಮಿತಿಯಿಲ್ಲ (ಶರತ್ತುಗಳು ಅನ್ವಯ)

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News