ಪಾಕಿಸ್ತಾನದಲ್ಲಿ 5.8 ತೀವ್ರತೆಯ ಭೂಕಂಪನ; ದಿಲ್ಲಿಯಲ್ಲೂ ಕಂಪನದ ಅನುಭವ

Update: 2024-09-11 08:56 GMT

   ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಪಾಕಿಸ್ತಾನದಲ್ಲಿ 5.8 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋಸೈನ್ಸಸ್ ಹೇಳಿದೆ. ಈ ಭೂಕಂಪನವು 10 ಕಿಮೀ ಆಳದಲ್ಲಿ ಸಂಭವಿಸಿದೆ ಎಂದು ಅದು ಹೇಳಿದೆ.

ಪಾಕಿಸ್ತಾನದ ಪೇಶಾವರ, ಇಸ್ಲಮಾಬಾದ್ ಹಾಗೂ ಲಾಹೋರ್, ಭಾರತದ ಹೊಸದಿಲ್ಲಿ, ಉತ್ತರ ಪ್ರದೇಶ, ಹರ್ಯಾಣ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ಭೂಕಂಪನದ ಅನುಭವವಾಗಿದೆ ಎಂದು ಹಲವರು ಹೇಳಿಕೊಂಡಿದ್ದಾರೆ.

“ಪಾಕಿಸ್ತಾನದಲ್ಲಿಂದು ಮಧ್ಯಾಹ್ನ 12.58 ನಿಮಿಷಕ್ಕೆ 5.8 ರಿಕ್ಟರ್ ತೀವ್ರತೆಯ ಭೂಕಂಪನ ಸಂಭವಿಸಿಸಿದೆ” ಎಂದು ರಾಷ್ಟ್ರೀಯ ಭೂಕಂಪ ಕೇಂದ್ರ ಹೇಳಿದೆ.

ಕಳೆದ ಎರಡು ವಾರಗಳಲ್ಲಿ ದಿಲ್ಲಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಘು ಭೂಕಂಪನ ಸಂಭವಿಸಿರುವುದು ಇದು ಎರಡನೆ ಬಾರಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News