ರಾಮೇಶ್ವರಂ: ಲಂಬವಾಗಿ ತೆರೆಯುವ ನೂತನ ಪಂಬನ್ ಸೇತುವೆ ಮೇಲಿನ ಪರಿಕ್ಷಾರ್ಥ ರೈಲಿನ ಸಂಚಾರ ಯಶಸ್ವಿ

Update: 2024-11-09 12:56 IST
photo of train on Pamban bridge

Screengrab:X/@airnewsalerts

  • whatsapp icon

ತಮಿಳುನಾಡು: ರಾಮೇಶ್ವರಂನಲ್ಲಿನ ಭಾರತದ ಮೊದಲ ಲಂಬವಾಗಿ ತೆರೆಯುವ ನೂತನ ಪಂಬನ್ ಸಮುದ್ರ ಸೇತುವೆಯ ಸದೃಢತೆ ಪರೀಕ್ಷಿಸುವ ಆಸಿಲೇಷನ್ ಮಾನಿಟರಿಂಗ್ ಸಿಸ್ಟಮ್ ಎಂಜಿನ್ ಸಂಚಾರ ಯಶಸ್ವಿಯಾಗಿದೆ.

ಮಂಡಪಂ-ರಾಮೇಶ್ವರಂ ನಡುವೆ ಪಂಬನ್ ಸೇತುವೆ ನಿರ್ಮಿಸಲಾಗಿದೆ. ಸೇತುವೆಯ ಪರೀಕ್ಷಾರ್ಥವಾಗಿ ಮಂಡಪಂನಿಂದ ರಾಮೇಶ್ವರಂವರೆಗೆ ರೈಲು ಪ್ರತಿ ಗಂಟೆಗೆ 121ಕಿ.ಮೀ. ವೇಗದಲ್ಲಿ ಸಂಚರಿಸಿದೆ. ಸೇತುವೆ ಮೇಲೆ ಇದರ ವೇಗ 80 ಕಿ.ಮೀ. ಇತ್ತು. ಒಟ್ಟು ಮೂರು ಬೋಗಿಗಳನ್ನು ಒಳಗೊಂಡ ಸರಕು ಸಾಗಣೆ ರೈಲು ಇದಾಗಿತ್ತು.

ಪಂಬನ್ ಸಮುದ್ರ ಸೇತುವೆ ಸುಮಾರು 2.2 ಕಿಮೀ ಉದ್ದವಿದ್ದು, ಮಂಡಪಂ ಪಟ್ಟಣದಿಂದ ರಾಮೇಶ್ವರಂಗೆ ಸಂಪರ್ಕ ಕಲ್ಪಿಸುತ್ತದೆ. ಇದೇ ಮಾರ್ಗದಲ್ಲಿ ಶತಮಾನದ ಹಿಂದೆ ಬ್ರಿಟಿಷರು ನಿರ್ಮಿಸಿದ್ದ ಸೇತುವೆಗೆ ಬದಲಾಗಿ ಈ ನೂತನ ಸೇತುವೆ ನಿರ್ಮಿಸಲಾಗಿದೆ.

ಪರೀಕ್ಷೆ ವೇಳೆ ಮಧುರೈ ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಎಲ್ಎನ್ ರಾವ್, ಉತ್ತರ ವಲಯದ ವಿಭಾಗೀಯ ಎಂಜಿನಿಯರ್ ಸಂದೀಪ್ ಭಾಸ್ಕರ್ ಸೇರಿದಂತೆ ಹಿರಿಯ ರೈಲ್ವೇ ಅಧಿಕಾರಿಗಳು ಉಪಸ್ಥಿತರಿದ್ದರು. ಮತ್ತೊಂದು ಪರೀಕ್ಷಾರ್ಥ ಸಂಚಾರವು ನ. 13ರಂದು ನಡೆಯಲಿದ್ದು, ಬೆಂಗಳೂರಿನಲ್ಲಿರುವ ದಕ್ಷಿಣ ರೈಲ್ವೆ ಸುರಕ್ಷತೆ ಆಯುಕ್ತ ಎ.ಎಂ. ಚೌಧರಿ ಈ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಇದಲ್ಲದೆ ಮತ್ತೊಂದು ಪರೀಕ್ಷೆ ನ. 14ರಂದು ನಡೆಯಲಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News