ಯೋಗ ಗುರು ರಾಮದೇವ್ ಗೆ ತಪ್ಪದ ಸಂಕಷ್ಟ| ಪತಂಜಲಿ ಹಲ್ಲಿನ ಪುಡಿಯಲ್ಲಿ ಮಾಂಸಾಹಾರಿ ಅಂಶ; ಆರೋಪ

Update: 2024-08-30 13:14 GMT

ಯೋಗ ಗುರು ರಾಮದೇವ್ | PC : ANI

ಹೊಸದಿಲ್ಲಿ: ಯೋಗ ಗುರು ರಾಮದೇವ್ ಅವರ ಪತಂಜಲಿ ಆಯುರ್ವೇದ ಟೂತ್ ಪೌಡರ್, ದಿವ್ಯ ದಂತ ಮಂಜನ್‌ನಲ್ಲಿ ಮಾಂಸಾಹಾರಿ ಅಂಶವಿದ್ದರೂ ಸಸ್ಯಾಹಾರಿ ಎಂದು ತಪ್ಪಾಗಿ ಬ್ರಾಂಡ್ ಮಾಡಲಾಗಿದೆ ಎಂದು ಆರೋಪಿಸಿ, ಸಲ್ಲಿಸಿರುವ ಅರ್ಜಿಯ ಸಂಬಂಧ ದಿಲ್ಲಿ ಹೈಕೋರ್ಟ್ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.

ನ್ಯಾಯಮೂರ್ತಿ ಸಂಜೀವ್ ನರುಲಾ ಅವರು ಕೇಂದ್ರ ಸರ್ಕಾರ ಮತ್ತು ಪತಂಜಲಿಯ ದಿವ್ಯ ಫಾರ್ಮಸಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 28 ರಂದು ನಡೆಯಲಿದೆ.

ವಕೀಲ ಯತಿನ್ ಶರ್ಮಾ ಅವರು ಸಲ್ಲಿಸಿದ ಅರ್ಜಿಯಲ್ಲಿ ಪತಂಜಲಿಯ ದಿವ್ಯ ದಂತ್ ಮಂಜನ್ ಪ್ಯಾಕೇಜಿಂಗ್ ಸಸ್ಯಾಹಾರಿ ಉತ್ಪನ್ನಗಳಿಗೆ ಮಾತ್ರ ನೀಡಲಾಗುವ ವಿಶಿಷ್ಟವಾದ ಹಸಿರು ಚುಕ್ಕೆಯನ್ನು ಹೊಂದಿದೆ. ಆದರೆ ಪ್ಯಾಕೇಜಿಂಗ್‌ನಲ್ಲಿರುವ ಪದಾರ್ಥಗಳ ಪಟ್ಟಿಯು ಹಲ್ಲಿನ ಪುಡಿಯಲ್ಲಿ ಸೆಪಿಯಾ ಅಫಿಷಿನಾಲಿಸ್ (ಸಾಮಾನ್ಯ ಕಟ್ಲ್‌ಫಿಶ್) ಇದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

ರಾಮ್‌ದೇವ್ ಮತ್ತು ಇತರರು ದಿವ್ಯ ದಂತ್ ಮಂಜನ್ ಉತ್ಪನ್ನವನ್ನು ಸಸ್ಯಾಹಾರಿ ಎಂದು ಪ್ರಚಾರ ಮಾಡುತ್ತಿದ್ದಾರೆ ಎಂದು ಅರ್ಜಿದಾರರು ವಾದಿಸಿದರು.

ಇದು ಡ್ರಗ್ಸ್ ಮತ್ತು ಕಾಸ್ಮೆಸ್ಟಿಕ್ಸ್ ಕಾಯ್ದೆಯನ್ನು ಉಲ್ಲಂಘಿಸುತ್ತದೆ ಎಂದು ಶರ್ಮಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News