ನಕ್ಸಲೀಯತೆ ಅಂತ್ಯಗೊಳ್ಳುತ್ತಿದ್ದಂತೆ ನಗರ ನಕ್ಸಲರು ತಲೆ ಎತ್ತುತ್ತಿದ್ದಾರೆ : ಪ್ರಧಾನಿ ಮೋದಿ ಕಿಡಿ

Update: 2024-10-31 06:29 GMT

ನರೇಂದ್ರ ಮೋದಿ | PC : PTI 

ಕೇವಡಿಯ (ಗುಜರಾತ್): ಅತ್ತ ಕಾಡುಗಳಲ್ಲಿ ನಕ್ಸಲೀಯತೆ ಅಂತ್ಯಗೊಳ್ಳುತ್ತಿದ್ದರೆ, ಇತ್ತ ನಗರ ನಕ್ಸಲರು ತಲೆ ಎತ್ತುತ್ತಿದ್ದಾರೆ ಎಂದು ವಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಗುರುವಾರ ತೀಕ್ಷ್ಣ ವಾಗ್ದಾಳಿ ನಡೆಸಿದರು.

ಗುಜರಾತ್ ನ ಕೇವಡಿಯದಲ್ಲಿ ಆಯೋಜನೆಗೊಂಡಿದ್ದ ಏಕತಾ ದಿನ ಪಥಸಂಚಲನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ನಗರ ನಕ್ಸಲರು ದೇಶವನ್ನು ಜಾತಿಯ ನೆಲೆಯಲ್ಲಿ ವಿಭಜಿಸಲು ಯತ್ನಿಸುತ್ತಿದ್ದಾರೆ. ಅವರು ಅಭಿವೃದ್ಧಿ ಹೊಂದಿದೆ ಭಾರತದ ವಿರುದ್ಧವಿದ್ದಾರೆ” ಎಂದು ಆರೋಪಿಸಿದರು.

ಸರಕಾರದ ಪ್ರಯತ್ನಗಳಿಂದ ದೇಶದಲ್ಲಿ ನಕ್ಸಲೀಯತೆ ಕೊನೆಯುಸಿರೆಳೆಯುತ್ತಿದೆ ಎಂದೂ ಅವರು ಪ್ರತಿಪಾದಿಸಿದರು.

ಇದಕ್ಕೂ ಮುನ್ನ, ಭಾರತದ ಪ್ರಥಮ ಗೃಹ ಸಚಿವ ಸರ್ದಾರ್ ವಲ್ಲಭ ಭಾಯಿ ಪಟೇಲ್ ಜನ್ಮದಿನಾಚರಣೆಯ ಪ್ರಯುಕ್ತ ಸರ್ದಾರ್ ವಲ್ಲಭ ಭಾಯಿ ಪಟೇಲ್ ಸ್ಮರಣಾರ್ಥ ನಿರ್ಮಿಸಲಾಗಿರುವ ಏಕತಾ ಪ್ರತಿಮೆಗೆ ಪ್ರಧಾನಿ ಮೋದಿ ಗೌರವ ನಮನ ಸಲ್ಲಿಸಿದರು.

2014ರಿಂದ ಸರ್ದಾರ್ ವಲ್ಲಭ ಭಾಯಿ ಪಟೇಲರ ಜನ್ಮ ದಿನಾಚರಣೆಯಾದ ಅಕ್ಟೋಬರ್ 31 ಅನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News