ಪ್ರಧಾನಿ ಮೋದಿ ಆದಿವಾಸಿಗಳನ್ನು ದ್ವೇಷಿಸುತ್ತಾರೆ; ಹೇಮಂತ್ ಸೊರೇನ್ ರನ್ನು ಜೈಲಿಗಟ್ಟಿದ್ದೇ ಇದಕ್ಕೆ ನಿದರ್ಶನ : ಅರವಿಂದ್ ಕೇಜ್ರಿವಾಲ್ ಆರೋಪ

Update: 2024-05-22 18:47 IST
ಪ್ರಧಾನಿ ಮೋದಿ ಆದಿವಾಸಿಗಳನ್ನು ದ್ವೇಷಿಸುತ್ತಾರೆ; ಹೇಮಂತ್ ಸೊರೇನ್ ರನ್ನು ಜೈಲಿಗಟ್ಟಿದ್ದೇ ಇದಕ್ಕೆ ನಿದರ್ಶನ : ಅರವಿಂದ್ ಕೇಜ್ರಿವಾಲ್ ಆರೋಪ

ಹೇಮಂತ್ ಸೊರೇನ್ (PTI) ,  ಅರವಿಂದ್ ಕೇಜ್ರಿವಾಲ್ (@ArvindKejriwal / X)

  • whatsapp icon

ಜಮ್ಶದ್ಪುರ: ಪ್ರಧಾನಿ ಮೋದಿ ಆದಿವಾಸಿಗಳನ್ನು ದ್ವೇಷಿಸುತ್ತಿದ್ದು, ಈ ಮಾತಿಗೆ ಝಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಜೈಲಿಗಾಕಿದ್ದು ನಿದರ್ಶನವಾಗಿದೆ ಎಂದು ಮಂಗಳವಾರ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಆರೋಪಿಸಿದರು.

ಹೇಮಂತ್ ಸೊರೇನ್ ಅವರನ್ನು ಭೂಕಬಳಿಕೆ ಪ್ರಕರಣವೊಂದರಲ್ಲಿ ಜಾರಿ ನಿರ್ದೇಶನಾಲಯವು ಜನವರಿ 31ರಂದು ಬಂಧಿಸಿತ್ತು.

ಮಂಗಳವಾರ ಇಲ್ಲಿ ನಡೆದ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ಹೇಮಂತ್ ಸೊರೇನ್ ಭಾರತದ ಅತ್ಯಂತ ಎತ್ತರದ ಆದಿವಾಸಿ ನಾಯಕರಾಗಿದ್ದಾರೆ ಎಂದು ಬಣ್ಣಿಸಿದರು. ಪ್ರಧಾನಿ ಮೋದಿಯು ಜಾರ್ಖಂಡ್ ಮುಕ್ತಿ ಮೋರ್ಚಾದ ನಾಯಕರಾದ ಹೇಮಂತ್ ಸೊರೇನ್ ಅವರನ್ನು ಬಂಧಿಸುವ ಮೂಲಕ ಇಡೀ ಆದಿವಾಸಿ ಸಮುದಾಯಕ್ಕೆ ಸವಾಲೊಡ್ಡಿದ್ದಾರೆ ಎಂದು ಅವರು ಆರೋಪಿಸಿದರು.

ಮೇ 25 ಹಾಗೂ ಜೂನ್ 1ರಂದು ರಾಜ್ಯದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾಗೆ ಮತ ಚಲಾಯಿಸುವ ಮೂಲಕ ಮೋದಿಯ ಆದಿವಾಸಿ ವಿರೋಧಿ ಕ್ರಮಗಳಿಗೆ ಪ್ರತಿಕ್ರಿಯೆ ನೀಡಬೇಕು ಎಂದು ಅವರು ರಾಜ್ಯದ ಮತದಾರರಿಗೆ ಕರೆ ನೀಡಿದರು.

ಆಮ್ ಆದ್ಮಿ ಪಕ್ಷ ಹಾಗೂ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷಗಳು ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟದ ಪಾಲುದಾರ ಪಕ್ಷಗಳಾಗಿವೆ.

ಸೌಜನ್ಯ : scroll.in

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News