ಪುಣೆಯಲ್ಲಿ ಭಾರಿ ಮಳೆ: ಪ್ರಧಾನಿ ಮೋದಿ ಭೇಟಿ ರದ್ದು
Update: 2024-09-26 11:28 GMT
ಹೊಸದಿಲ್ಲಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ಮುನ್ನ ನಿಗದಿಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಪುಣೆ ಭೇಟಿಯು, ನಗರದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ ರದ್ದುಗೊಂಡಿದೆ.
ಪುಣೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಕೇವಲ ಮೂರು ಗಂಟೆಗಳಲ್ಲೇ 86 ವರ್ಷದ ಮಳೆ ದಾಖಲೆ ಅಳಿಸಿ ಹೋಗಿದೆ ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ. ನಗರದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದೆ.
ಸೋಲಾಪುರ್ ವಿಮಾನ ನಿಲ್ದಾಣ ಉದ್ಘಾಟನೆಯೊಂದಿಗೆ ಒಟ್ಟು ರೂ. 22,600 ಕೋಟಿ ಮೊತ್ತದ ಸರಣಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಬೇಕಿತ್ತು.
ಇದಲ್ಲದೆ, ಪುಣೆ ಜಿಲ್ಲಾ ನ್ಯಾಯಾಲಯ ಮೆಟ್ರೊ ನಿಲ್ದಾಣದಿಂದ ಸ್ವರ್ಗತೆವರೆಗಿನ ಮೆಟ್ರೊ ರೈಲು ಸಂಚಾರಕ್ಕೂ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿಸಬೇಕಿತ್ತು.