1700 ಕೋಟಿ ರೂ. ವೆಚ್ಚದ ನಳಂದ ವಿವಿ ಕ್ಯಾಂಪಸ್ ಉದ್ಘಾಟಿಸಿದ ಪ್ರಧಾನಿ ಮೋದಿ

Update: 2024-06-19 07:18 GMT

Photo:X/@narendramodi

ಪಾಟ್ನಾ: ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ನಳಂದ ವಿಶ್ವವಿದ್ಯಾನಿಲಯದ ನೂತನ ಕ್ಯಾಂಪಸ್ ಉದ್ಘಾಟಿಸಿದರು.

ಸತತ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೋದಿ ಬಿಹಾರಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಇದಕ್ಕೂ ಮುನ್ನ ಅವರು ಬಿಹಾರದ ಪ್ರಾಚೀನ ನಳಂದ ವಿಶ್ವವಿದ್ಯಾನಿಲಯದ ಪಳೆಯುಳಿಯುವಿಕೆಗಳಿರುವ ಜಾಗಕ್ಕೆ ಭೇಟಿ ನೀಡಿದ್ದರು. ಈ ಪ್ರದೇಶವನ್ನು 2016ರಲ್ಲಿ ವಿಶ್ವಸಂಸ್ಥೆ ಪರಂಪರೆಯ ತಾಣ ಎಂದು ಘೋಷಿಸಿತ್ತು.

ನಳಂದ ವಿವಿ ನೂತನ ಕ್ಯಾಂಪಸ್ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಭಾಗದ ಯುವಜನತೆಯ ಶೈಕ್ಷಣಿಕ ಅಗತ್ಯತೆಗಳನ್ನು ಈಡೇರಿಸುವಲ್ಲಿ ಬಹುದೂರ ಸಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

"ಇಂದು ಶಿಕ್ಷಣ ವಲಯಕ್ಕೆ ವಿಶೇಷ ದಿನ. ಇಂದು ಮುಂಜಾನೆ 10.30ಕ್ಕೆ ರಾಜಗೀರ್‍ನಲ್ಲಿ ನಳಂದ ವಿವಿಯ ಹೊಸ ಕ್ಯಾಂಪಸ್ ಉದ್ಘಾಟನೆಯಾಗಲಿದೆ. ನಮ್ಮ ವೈಭವೋಪೇತ ಇತಿಹಾಸದಕ್ಕೂ ನಳಂದಕ್ಕೂ ಅವಿನಾಭಾವ ಸಂಬಂಧ ಇದೆ" ಎಂದು ಎಕ್ಸ್ ನಲ್ಲಿ ಮೋದಿ ಬಣ್ಣಿಸಿದ್ದಾರೆ.

ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್, ಬಿಹಾರ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್, ಸಿಎಂ ನಿತೀಶ್ ಕುಂಆರ್, ನಳಂದ ವಿವಿ ಕುಲಪತಿ ಅರವಿಂದ್ ಪನಗಾರಿಯಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಒಟ್ಟು 17 ದೇಶಗಳ ರಾಜತಾಂತ್ರಿಕರೂ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News