ಪೋಸ್ಕೊ: ಸಮ್ಮತಿಯ ಲೈಂಗಿಕ ಸಂಪರ್ಕದ ಕನಿಷ್ಠ ವಯೋಮಿತಿ ಇಳಿಕೆಗೆ ಕಾನೂನು ಆಯೋಗ ವಿರೋಧ
ಹೊಸದಿಲ್ಲಿ: .ಪೊಸ್ಕೋ ಕಾಯ್ದೆಯಡಿ ಲೈಂಗಿಕ ಸಂಪರ್ಕಕ್ಕೆ ಸಮ್ಮತಿಯ ಕನಿಷ್ಠ ವಯೋಮಿತಿಯನ್ನು 18ರಿಂದ 16ಕ್ಕೆ ಇಳಿಸುವುದರ ವಿರುದ್ಧ ಕಾನೂನು ಆಯೋಗವು ಕೇಂದ್ರ ಸರಕಾರಕ್ಕೆ ಸಲಹೆ ನೀಡಿದೆ . ಹಾಗೆ ಮಾಡುವುದರಿಂದ ಬಾಲ್ಯ ವಿವಾಹ ಹಾಗೂ ಮಕ್ಕಳ ಸಾಗಾಣಿಕೆ ವಿರುದ್ಧ ಹೋರಾಟದ ಮೇಲೂ ನಕಾರಾತ್ಮಕ ಪರಿಣಾಮವುಂಟಾಗಲಿದೆಯೆಂದು ಅದು ಕಳವಳ ವ್ಯಕ್ತಪಡಿಸಿದೆ.
ಆದರೂ, 16ರಿಂದ 18ನೇ ವಯಸ್ಸಿನೊಳವರಿಂದ ಲೈಂಗಿಕ ಸಂಪರ್ಕಕ್ಕೆ ಸೂಚಿತ ಸಮ್ಮತಿಯಿದ್ದಂತಹ ಪ್ರಕರಣಗಳಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಕಾನೂನುಪರಿಹಾರ ಕಂಡುಹಿಡಿಯುವುದಕ್ಕಾಗಿ ಕಾಯ್ದೆಗೆ ಸೂಕ್ತ ತಿದ್ದುಪಡಿ ಮಾಡುವಂತೆಯೂ ಸಮಿತಿಯು ಸೂಚಿಸಿದೆ. ಇಂತಹ ಪ್ರಕರಣಗಳಲ್ಲಿ ನ್ಯಾಯಾಂಗವು ನಿರ್ದೇಶಿತ ವಿಶೇಷಾಧಿಕಾರವನ್ನು ಬಳಸಿಕೊಳ್ಳಬಹುದೆಂದು ಸಮಿತಿ ಸಲಹೆ ನೀಡಿದೆ.
ಪೊಸ್ಕೋ ಕಾಯ್ದೆಯಡಿ ಸಮ್ಮತಿಯ ಲೈಂಗಿಕ ಸಂಪರ್ಕಕ್ಕೆ ನಿಗದಿಪಡಿಸಲಾದ ಕನಿಷ್ಠ ವಯೋಮಿತಿ ಕುರಿತು ಹೆಚ್ಚುತ್ತಿರುವ ಕಳವಳಗಳ ಬಗ್ಗೆ ಸ್ಪಂದಿಸುವಂತೆ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಲೋಕಸಭೆಯನ್ನು ಆಗ್ರಹಿಸಿದ್ದರು.