ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಬೆನ್ನಿಗೇ ದುಬೈಗೆ ಪರಾರಿಯಾದ ಪೂಜಾ ಖೇಡ್ಕರ್: ವರದಿ
Update: 2024-08-03 07:42 GMT
ಹೊಸದಿಲ್ಲಿ: ಗುರುವಾರ ದಿಲ್ಲಿ ನ್ಯಾಯಾಲಯವೊಂದರಿಂದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಬೆನ್ನಿಗೇ ನಾಪತ್ತೆಯಾಗಿರುವ ವಿವಾದಾತ್ಮಕ ತರಬೇತಿನಿರತ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ದುಬೈಗೆ ಪರಾರಿಯಾಗಿದ್ದಾರೆ ಎಂದು Firstpost ಸುದ್ದಿ ಸಂಸ್ಥೆ ವರದಿ ಮಾಡಿದೆ.
ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದ ಪೂಜಾ ಖೇಡ್ಕರ್, ತಮ್ಮ ವಿರುದ್ಧ ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ಹಾಗೂ ವಿಕಲ ಚೇತನ ಮೀಸಲಾತಿಯನ್ನು ತಪ್ಪಾಗಿ ಪಡೆದು, ವಂಚಿಸಿದ ಆರೋಪವಿದ್ದು, ಇದು ಗಂಭೀರ ಆರೋಪವಾಗಿರುವುದರಿಂದ ಆಳವಾದ ತನಿಖೆ ಬಯಸುತ್ತದೆ ಎಂದು ಹೇಳಿದ್ದಾರೆ.
ಇಲ್ಲಿಯವರೆಗೂ ಈ ಪ್ರಕರಣದಲ್ಲಿ ಬಂಧಿತರಾಗಿರದ ಪೂಜಾ ಖೇಡ್ಕರ್, ಬಂಧನದ ಬೆದರಿಕೆ ಇದೆ ಎಂದು ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.